ಕರಾವಳಿ

ಮಂಗಳೂರು ಬಿಷಪರ ಬೆಂಬಲ ಕೋರಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು, ಮಾರ್ಚ್,26: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಮಂಗಳೂರಿನಲ್ಲಿರುವ ಬಿಷಪ್ ಹೌಸ್ ಗೆ ಭೇಟಿ ನೀಡಿದರು.

ಈ ವೇಳೆ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾಣ ಅವರ ಜೊತೆ ಮಾತು ಕತೆ ನಡೆಸಿದ ನಳಿನ್ ಕುಮಾರ್ ಕಟೀಲ್ ಅವರು ಎರಡು ಅವಧಿಗಳಲ್ಲಿ ತಾನು ಸಂಸದನಾಗಿ ಅಯ್ಕೆಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಳಿಗೆ ಶ್ರಮಿಸಿರುವುದಾಗಿ ತಿಳಿಸಿದರು. ಮಾತ್ರವಲ್ಲದೇ ಪ್ರಧಾನಿ ಮೋದಿ ಈಗಾಗಲೇ ದೇಶದ ಒಳಿತಿಗಾಗಿ ಕೈಗೊಂಡಂತಹ ಯೋಜನೆಗಳ ಬಗ್ಗೆ ನೆನಪಿಸಿ, ಮೋದಿ ಸರಕಾರ ಅಲ್ಪ ಸಂಖ್ಯಾತರ ಅಭಿವೃದ್ಧಿ ಅದರಲ್ಲೂ ಕ್ರೈಸ್ತರ ಅಭಿವೃದ್ಧಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಪ್ರಸ್ತಾಪಿಸಿ, ಮೂರನೇ ಅವಧಿಯಲ್ಲೂ ತಾನು ಸಂಸದನಾಗಿ ಆರಿಸಿ ಬರುವಂತೆ ಬೆಂಬಲ ಕೋರಿ ಬಿಷಪರ ಆರ್ಶೀವಾದ ಪಡೆದರು.

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗ್ಲಾಡ್ವಿನ್ ಡಿ”ಸಿಲ್ವ ಹಾಗೂ ಮತ್ತಿತ್ತರ ಪಕ್ಷದ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

Comments are closed.