ಕರಾವಳಿ

ಕೊಡ್ಮಾನ್ ಶಕ್ತಿ ಕೇಂದ್ರದ ಸಭೆ : ಮೋದಿ ಕೈಬಲಪಡಿಸಲು ಶಾಸಕ ಕಾಮತ್ ಕಾರ್ಯಕರ್ತರಿಗೆ ಕರೆ

Pinterest LinkedIn Tumblr

ಮಂಗಳೂರು : ಭಾರತೀಯ ಜನತಾ ಪಾರ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮೇರಮಜಲು ಕೊಡ್ಮಾನ್ ಶಕ್ತಿ ಕೇಂದ್ರದ ಸಭೆಯು ಅಬ್ಬೆಟ್ಟು ಜಯರಾಮ ಶೆಟ್ಟಿಯವರ ನಿವಾಸದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಹಾಗೂ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷರೂ ಆಗಿರುವ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರದ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶ ನಮ್ಮ ಕಾರ್ಯಕರ್ತಿಗೆ ಇದೆ. ಮೋದಿಯವರ ಪ್ರತಿಯೊಂದು ಯೋಜನೆಗಳ ನೇರ ಲಾಭ ಫಲಾನುಭವಿಗಳಿಗೆ ಆಗುತ್ತಿದೆ. ಉಜ್ವಲ ಯೋಜನೆ, ಮುದ್ರಾ ಯೋಜನೆ, ವಸತಿ ಯೋಜನೆಗಳಿಂದ ನಮ್ಮ ಜಿಲ್ಲೆಯ ಸಹಸ್ರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಅದೇ ರೀತಿಯಲ್ಲಿ ಮೋದಿಜಿಯವರ ಪ್ರತಿಯೊಂದು ಯೋಜನೆಗಳು ಮುಖ್ಯವಾಗಿ ಆಯುಷ್ಯಮಾನ್ ಭಾರತ ಸಹಿತ ವಿವಿಧ ಸವಲತ್ತು ಗಳನ್ನು ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮನೆಮನೆಗಳಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ.

ಹದಿನಾರು ಸಾವಿರ ಕೋಟಿ ಅನುದಾನವನ್ನು ನಮ್ಮ ಜಿಲ್ಲೆಗೆ ತಂದಿರುವ ನಳಿನ್ ಅವರನ್ನು ಈ ಬಾರಿ ಮತ್ತೆ ಗೆಲ್ಲಿಸಿ ಮೋದಿಯವರ ಶಕ್ತಿಯನ್ನು ವರ್ಧಿಸಬೇಕಿದೆ ಎಂದು ತಿಳಿಸಿದರು.

ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರು ಯಾವ ರೀತಿ ಕೆಲಸಕಾರ್ಯ ಮಾಡಬೇಕು ಎಂದು ಶಾಸಕ ಕಾಮತ್ ಮಾಹಿತಿ ನೀಡಿದರು.

ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮನೋಹರ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್, ಎಂಪಿಎಂಸಿ ಸದಸ್ಯ ವಿಠಲ್ ಸಾಲ್ಯಾನ್, ಶ್ರೀರಾಮ ನಾಮ ತಾರಕ ಯಾಗ ಸಮಿತಿಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಕ್ಷೇತ್ರದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಜಯಶ್ರೀ ಕರ್ಕೇರ, ಹಿರಿಯರಾದ ಗಂಗಾಧರ ಕೊಟ್ಯಾನ್ ಅಬೆಟ್ಟು , ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು.

Comments are closed.