ಕರಾವಳಿ

ಟ್ರೋಲ್ ಬಾಸ್ ಮಲ್ಪೆ ವಾಸುವಿಗೆ ಎಚ್ಚರಿಕೆ ನೀಡಿದ ಪೊಲೀಸರು!

Pinterest LinkedIn Tumblr

ಉಡುಪಿ:  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಬಾಸ್ ಎಂದೇ ಪ್ರಸಿದ್ಧಿ ಪಡೆದ ಉಡುಪಿ ಮಲ್ಪೆ ವಾಸು ಎನ್ನುವರನ್ನು ಆಪೇಕ್ಷಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಉಡುಪಿ ಸೆನ್ ಪೊಲೀಸರು ಭಾನುವಾರದಂದು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.

ಮೊದಲಿಗೆ ವಾಸು ಅವರನ್ನು ಬಂಧನ ಮಾಡಲಾಗಿದೆಯೆಂದು ಬಾರೀ ಸುದ್ದಿಯಾಗಿತ್ತು. ಆದರೆ ಇದನ್ನು ಅಲ್ಲಗಳೆದ ಪೊಲೀಸರು ತಾವು ಬಂದಿಸಿಲ್ಲ, ಬದಲಾಗಿ ಕರೆಯಿಸಿ ಎಚ್ಚರಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ಚುನಾವಣೆ ಸಂಹಿತೆ ಜಾರಿಯಲ್ಲಿದ್ದು ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ವಾಸು ಅವರನ್ನು ಕರೆತಂದು ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.

ಯಾರೀ ವಾಸು?
ಮಲ್ಪೆ ಭಾಗದಲ್ಲಿ ವಾಸಣ್ಣ ಎಂದೇ ಕರೆಯಲ್ಪಡುವ ವಾಸು ಬಳಿ ಮೊಬೈಲ್ ಇಲ್ಲ. ಆದರೂ ಕೂಡ ಅವರ ನಿತ್ಯದ ಕೆಲವು ಹೇಳಿಕೆ, ಚಲನವಲನಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದವು. ಆ ವಿಡಿಯೋಗಳ ಪೈಕಿ ಒಂದು ಪಕ್ಷದ ವಿರುದ್ಧ ಠೀಕೆ, ಆಪೇಕ್ಷಾರ್ಹ ಹೇಳಿಕೆಗಳೂ, ಒಂದು ರಾಜಕೀಯ ಪಕ್ಷದ ನಾಯಕರಿಗೆ ತೆಗಳಿ ಅಪಹಾಸ್ಯ ಮಾಡುವ ವಿಡಿಯೋಗಳು ಇದ್ದು ಇದು ವೈರಲ್ ಆಗುತ್ತಿದ್ದವು. ಇನ್ನೂ ಈ ವಾಸು ಪೂಜಾರಿ ಹೆಸರಿನಲ್ಲಿ ಪೇಸ್ ಬುಕ್ ಅಕೌಂಟ್ ಮತ್ತು ಪೇಜ್ ಇದ್ದು ಇದನ್ನು ಯಾರೂ ಮಾಡಿದ್ದಾರೆಂಬುದು ತಿಳಿದಿಲ್ಲ.

ವಾಸು ಅವರಿಗೆ ಕೆಲ ಅಪರಿಚಿತರು ಹಣ, ಮದ್ಯದ ಆಸೆ ತೋರಿಸಿ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿದ್ದು ಮುಂದಿನ ದಿನಗಳಲ್ಲಿ ವಾಸು ಅವರ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರೆ ಕಾನೂನು ಕ್ರಮಕೈಗೊಳ್ಳಬೇಕೆಂದು ಕೂಡ ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments are closed.