ರಾಷ್ಟ್ರೀಯ

ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ; ಬಿಜೆಪಿ ಹಿರಿಯ ನಾಯಕ ನಡೆದು ಬಂದ ಹಾದಿ!

Pinterest LinkedIn Tumblr

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ವಿಧಿವಶರಾಗಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ವಿಧಿವಶರಾಗಿದ್ದಾರೆ.

63 ವರ್ಷದ ಪರಿಕ್ಕರ್ ಅವರು ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ದೆಹಲಿಯ ಏಮ್ಸ್ ನಿಂದ ಚಿಕಿತ್ಸೆ ಪಡೆದು ವಾಪಸಾಗಿ ಸರ್ಕಾರ ನಡೆಸಿದ್ದರು. ನಿನ್ನೆ ದಿಢೀರ್ ಸುಸ್ತಾಗಿದ್ದರಿಂದ ಅವರಿಗೆ ಮತ್ತೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ದುರ್ದೈವ ವಿಧಿವಶರಾಗಿದ್ದಾರೆ.

ಪರ್ರಿಕರ್​​ ಜೀವನ: ಮನೋಹರ್ ಪರಿಕರ್ 1955 ವರ್ಷದಲ್ಲಿ ಡಿಸೆಂಬರ್ 13ನೇ ತಾರೀಕು ಜನಿಸಿದ್ದರು. ಮಾರ್ಗೋವಾದ ಲಯೋಲಾ ಎಂಬ ಪ್ರೌಢಶಾಲೆಯಲ್ಲಿ ಮರಾಠಿ ಮಾಧ್ಯಮದಲ್ಲಿಯೇ ತಮ್ಮ ವಿದ್ಯಾಭ್ಯಾಸ ಮಾಡಿದರು. ಬಳಿಕ 1978ರಲ್ಲಿ ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.

ರಾಜಕೀಯ: ಅದಾದ ನಂತರ ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿದ ಕೂಡಲೇ ರಾಜಕೀಯಕ್ಕೆ ಪ್ರವೇಶಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲಿ ಪರಿಕರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದವರು. ತಾವು ವಿದ್ಯಾಭ್ಯಾಸ ಮಾಡಿದ ಐಐಟಿಯಿಂದಲೇ ಆರ್​​ಎಸ್​​ಎಸ್​​ಕೆಲಸಗಳನ್ನು ಆರಂಭಿಸಿದ್ದರು. ಆರ್​​ಎಸ್​ಎಸ್​​ ಉತ್ತರ ಗೋವಾ ಘಟಕದಲ್ಲಿ ಸಕ್ರಿಯರಾಗಿದ್ದು, ರಾಮ ಜನ್ಮ ಭೂಮಿ ಚಳವಳಿಯ ನೇತೃತ್ವ ವಹಸಿದ್ದರು.

ಮನೋಹರ್ ಪರ್ರಿಕರ್​​ ಜನತಾ ಪಕ್ಷದ ಸಕ್ರಿಯ ರಾಜಕಾರಣಿ. ಅವರು ಮೊದಲ ಬಾರಿಗೆ ಬಿಜೆಪಿಯಿಂದಲೇ 1994ರಲ್ಲಿ ಶಾಸಕರಾಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ 39 ವರ್ಷ ವಯಸ್ಸು. 1999ರ ಜೂನ್ ನಿಂದ ನವೆಂಬರ್ ತನಕ ಗೋವಾದ ವಿಪಕ್ಷ ನಾಯಕರಾಗಿದ್ದರು. ಬಳಿಕ ಮನೋಹರ್ ಪರಿಕರ್ ಮೊದಲ ಬಾರಿಗೆ ಗೋವಾದ ಮುಖ್ಯಮಂತ್ರಿಯಾಗಿದ್ದು ಅಕ್ಟೋಬರ್ 24ರಂದು 2000ನೇ ಇಸವಿಯಲ್ಲಿ.

ಬಳಿಕ 2002ರಲ್ಲಿ ಇವರ ಅಧಿಕಾರಾವಧಿ ಕೊನೆಯಾಯಿತು. ಜೂನ್ 2002ರಲ್ಲಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಗೆ ಪುನರಾಯ್ಕೆ ಆದರು. 2007ರಲ್ಲಿ ದಿಗಂಬರ್ ಕಾಮತ್ ನೇತೃತ್ವದ ಕಾಂಗ್ರೆಸ್ ಪಕ್ಷವು ಮನೋಹರ್ ಪರಿಕರ್ ಮುಂದಾಳತ್ವದ ಬಿಜೆಪಿಯನ್ನು ಸೋಲಿಸಿ, ಅಧಿಕಾರ ಹಿಡಿಯಿತು. ನಂತರ 2012ರಲ್ಲಿ ಮತ್ತೆ ಮನೋಹರ್ ಪರಿಕರ್ ಬಿಜೆಪಿಯನ್ನು ಗೆಲ್ಲಿಸಲು ಸಫಲರಾಗಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಗೋವಾದ ಎರಡೂ ಸ್ಥಾನ ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಈ ಮೂಲಕ ಪರಿಕರ್ ಪಕ್ಷದಲ್ಲಿ ಮತ್ತಷ್ಟು ಪ್ರಬಲರಾದರು. 2014ರಲ್ಲಿ ಪ್ರಧಾನಿ ಮೋದಿ ಅವರೇ ಮನೋಹರ್ ಪರಿಕರ್ ಅವರಿಗೆ ರಕ್ಷಣಾ ಖಾತೆ ನೀಡಿದರು. ಅದನ್ನು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಕುಟುಂಬ: ಇನ್ನು ಪರ್ರಿಕರ್​​ಗೆ ಐಐಟಿ ಮುಂಬೈ 2001 ರಲ್ಲಿ ಡಿಸ್ಟಿಂಗ್ವಿಶ್ಡ್ ಆಲಮ್ನಸ್ ಪ್ರಶಸ್ತಿ ನೀಡಿದೆ. ಅವರ ಪತ್ನಿ ಮೇಧಾ ಪಾರಿಕ್ಕರ್ 2000ರಲ್ಲಿ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಎನ್ನುತ್ತಿವೆ ಮೂಲಗಳು.

Comments are closed.