ಕರಾವಳಿ

ಮಂಗಳೂರು : ಪ್ರತಿ ಮನೆಗೆ ಶೌಚಾಲಯ ಯೋಜನೆಗೆ ಎಪಿಡಿ ಚಾಲನೆ

Pinterest LinkedIn Tumblr

ಮಂಗಳೂರು : ಕುಂಜತ್ತಬೈಲಿನಲ್ಲಿ ಆಂಟಿ ಪೊಲ್ಯೂಷನ್ ಡ್ರೈವ್ (ಎಪಿಡಿ) ಫೌಂಡೇಶನ್ ನಿರ್ಮಿಸಿದ ಮೊದಲ ಶೌಚಾಲಯವನ್ನು ಉದ್ಘಾಟಿಸುವ ಮೂಲಕ ಪ್ರತಿ ಮನೆಗೆ ಶೌಚಾಲಯ ಯೋಜನೆಗೆ ಎಪಿಡಿ ಫೌಂಡೇಶನ್ ಚಾಲನೆ ನೀಡಿದೆ.

‘2019ರ ಒಳಗೆ ಬಯಲು ಮಲವಿಸರ್ಜನೆ ಮುಕ್ತ ರಾಷ್ಟ್ರ’ ಎಂದು ಸರಕಾರ ಘೋಷಿಸಿದ ನಂತರ ಮಂಗಳೂರು ಮೂಲದ ಎನ್ಜಿ‌ಒ ಆಂಟಿ ಪೊಲ್ಯೂಷನ್ ಡ್ರೈವ್ ನಗರ ನೈರ್ಮಲ್ಯವನ್ನು ಸುಧಾರಿಸಲು ಕೈಗೊಂಡ ಹೊಸ ಕಾರ್ಯಕ್ರಮ ಇದಾಗಿದೆ.

ಯೋಜನೆಯನ್ನು ಪರಿಚಯಿಸುತ್ತಾ ನಾನು ವಿದೇಶದಿಂದ ಹಿಂದಿರುಗಿದ ನಂತರ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದು, ಎಪಿಡಿಯ ಯೋಜನೆಯ ಬಗ್ಗೆ ನಾನು ಅರಿತುಕೊಂಡೆ. ದೇಶದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಜನರು ಬಯಲು ಮಲವಿಸರ್ಜನೆ ಮಾಡುತ್ತಿದ್ದಾರೆ. ಆದುದರಿಂದ ಎಪಡಿಯ ಈ ಶೌಚಾಲಯ ನಿರ್ಮಾಣ ಯೋಜನೆಯಲ್ಲಿ ಸಹಯೋಗ ನೀಡಲು ಸಂತೋಷವಾಗುತ್ತಿದೆ ಎಂದು ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿಜ್ಞಾನಿ ಮತ್ತು ಯೋಜನಾ ಸಂಚಾಲಕಿಕಿ ಮೆಲಾನಿ ರೊಡ್ರಿಗಸ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 4900 ಮನೆಗಳಿಗೆ ಶೌಚಾಲಯಗಳಿಲ್ಲ ಎಂಬ ವರದಿ ಗಮನಿಸಿದೆ.ಇದೆ. ಜಿಲ್ಲೆಯಲ್ಲಿ ವ್ಯಾಪಕ ಸಮೀಕ್ಷೆ ನಂತರ ಈ ಕುಟುಂಬಗಳಿಗೆ ಮುಂಬರುವ ದಿನಗಳಲ್ಲಿ ಶೌಚಾಲಯ ಸೌಲಭ್ಯ ದೊರೆಯುವಂತಾಗಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಪೊಲೀಸ್ ಅಧಿಕಾರಿ ಉದಯ್ ನಾಯಕ್ ಹೇಳಿದರು.

ಎಪಿಡಿಯ ಈ ಯೋಜನೆಯ ಮೊದಲ ಫಲಾನುಭವಿ ಚಂದ್ರಾವತಿ ಕಳೆದ ಎರಡು ದಶಕಗಳಿಂದ ಕುಂಜತ್ತಬೈಲಿನಲ್ಲಿ ವಾಸಿಸುತ್ತಿರುವ ಹಿರಿಯ ಮಹಿಳೆ. ಕಳೆದ 20 ವರ್ಷಗಳಿಂದ ನಾನು ಇಲ್ಲಿ ವಾಸಿಸುತ್ತಿದ್ದೇನೆ ಮತ್ತು ಟಾಯ್ಲೆಟ್ ಇಲ್ಲದಿದ್ದರೂ, ಒಂದೆರಡು ವರ್ಷದ ಹಿಂದೆ ಮನೆಗೆ ವಿದ್ಯುತ್ ಸಂಪರ್ಕ ದೊರೆಯಿತು. ಟಾಯ್ಲೆಟ್ ನಿರ್ಮಿಸಲು ಸಹಾಯ ನೀಡಿರುವುದಕ್ಕಾಗಿ ಎಪಿಡಿಗೆ ನಾನು ಕೃತಜ್ಞರಾಗಿರುತ್ತೇನೆ” ಎಂದು ಅವರು ಹೇಳಿದರು.

ಎಡಿಡಿ ಸಂಸ್ಥಾಪಕ ಮತ್ತು ಸಿ‌ಇ‌ಒ ಅಬ್ದುಲ್ಲಾ ಎ. ರೆಹಮಾನ್, ಓಡಿ‌ಎಫ್ ಯೋಜನೆಗಳ ಸರಿಯಾದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಜಿಲ್ಲಾ ನಗರಾಭಿವೃದ್ಧಿ ಕೇಂದ್ರದ (ಡಿಯುಡಿಸಿ) ಸದಸ್ಯನಾಗಿದ್ದು, ಯೋಜನೆಯ ಕರಪತ್ರಗಳನ್ನು ಬಿಡುಗಡೆ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಓಪನ್ ಡೆಫಿಸೇಷನ್ ಫ್ರೀ (ಓಡಿ‌ಎಫ್) ಜಿಲ್ಲೆಯೆಂದು ಘೋಷಿಸಲ್ಪಟ್ಟಿದೆಯಾದರೂ, ಈಗಲೂ ಶೌಚಾಲಯಗಳಿಲ್ಲದ ಹಲವಾರು ಮನೆಗಳನ್ನು ಕಾಣಬಹುದಾಗಿದೆ. ನೈರ್ಮಲ್ಯ ಅಥವಾ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಪ್ರತಿ ಮನೆಯವರಿಗೆ ಶೌಚಾಲಯವನ್ನು ಒದಗಿಸುವ ಪ್ರಯತ್ನವನ್ನು ಸರಕಾರ ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದರು.

ಎಪಿಡಿ ನಿರ್ದೇಶಕ ಅರ್ಜುನ್ ರೈ ಮತ್ತು ಮಂಗಳೂರು ರೌಂಡ್ ಟೇಬಲ್ ಅಧ್ಯಕ್ಷ ಹ್ಯಾರೋನ್ ಫರ್ನಾಂಡಿಸ್, ಎಪಿಡಿ ತಂಡದ ಸದಸ್ಯರಾದ ವಾಣಿಶ್ರೀ, ಕಾರ್ಲ್ ಡಿ ಕುನ್ಹಾ, ರಾಸ್ಮಿಯ ಶೇಖ್, ತನಿಮಾ ಬೇಕಲ್ ಮತ್ತು ಧನುಷ್ ದೇಸಾಯಿ ಉಪಸ್ಥಿತರಿದ್ದರು. ಮಹೇಶ್ ನಾಯಕ್ ಕಾರ್ಯಕ್ರಮವನ್ನು ನಡೆಸಿದರು.

Comments are closed.