ಕರಾವಳಿ

ಭಾರತವನ್ನು ಶಕ್ತಿ ಶಾಲಿ ಹಾಗೂ ಆರ್ಥಿಕವಾಗಿ ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಕೇಂದ್ರ ಸರಕಾರದ ಗುರಿ ; ಗೃಹ ಸಚಿವ ರಾಜನಾಥ್ ಸಿಂಗ್

Pinterest LinkedIn Tumblr

ಮಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತ ವಿಶ್ವದ 6ನೇ ರಾಷ್ಟ್ರವಾಗಿದೆ. ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವಾಗಿ, ತಂತ್ರಜ್ಞಾನ, ಆರ್ಥಿಕವಾಗಿ ಸಮೃದ್ಧ ರಾಷ್ಟ್ರವಾಗಿ ರೂಪಿಸುವುದು ಕೇಂದ್ರ ಸರಕಾರದ ಗುರಿ. ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮೂರನೇಯ ದೇಶವಾಗಿ ಮೂಡಿ ಬರಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನಗರದ ಎಂಜಿ ರಸ್ತೆಯಲ್ಲಿರುವ ಟಿಎಂಎಪೈ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತವನ್ನು ಶಕ್ತಿಶಾಲಿ ರಾಷ್ಟ್ರವಾಗಿ, ಆರ್ಥಿಕವಾಗಿ ಸುದೃಢ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಲಯುತ ರಾಷ್ಟ್ರವಾಗಿ ರೂಪಿಸುವುದೇ ನಮ್ಮ ಸರ್ಕಾರದ ಧ್ಯೇಯವಾಗಿದೆ. ಭಾರತವನ್ನು ವಿಶ್ವಗುರು ರಾಷ್ಟ್ರವನ್ನಾಗಿ ಮಾಡಿ, ಸೂಪರ್ ಪವರ್ ದೇಶವಾಗಿ ರೂಪಿಸುವುದು ಕೇಂದ್ರ ಸರ್ಕಾರದ ಗುರಿ ಎಂದು ಅವರು ಹೇಳಿದರು.

ಈಗಾಗಲೇ ದೇಶದಲ್ಲಿ ಹಣದುಬ್ಬರದ ವೇಗ ಶೇ. 50ರಷ್ಟು ಕುಸಿತ ಕಂಡಿದೆ. ಅಲ್ಲದೆ ಶೌಚಾಲಯ ನಿರ್ಮಾಣದಲ್ಲೂ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಬಜೆಟ್​ನಲ್ಲಿ ರೈತರಿಗೆ ವಾರ್ಷಿಕ ಆರು ಸಾವಿರ ಧನಸಹಾಯ ನೀಡುವ ರೈತ ಸನ್ಮಾನ್ ಯೋಜನೆ, 60 ವರ್ಷ ದಾಟಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಮೂರು ಸಾವಿರ ರೂ. ವಾರ್ಷಿಕ ಪಿಂಚಣಿ ಯೋಜನೆಯನ್ನು ಹಮ್ಮಿಕೊಂಡಿದೆ. ಅಲ್ಲದೆ ಮೀನುಗಾರರಿಗೆ ಪ್ರತ್ಯೇಕವಾದ ಸಚಿವಾಲಯ ಆರಂಭಿಸಿದೆ ಎಂದರು.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅಲ್ಲಿನ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಪುಲ್ವಾಮಾದಲ್ಲಿ ಮಡಿದ ಕರ್ನಾಟಕದ ಯೋಧ ಗುರುವಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Comments are closed.