ಕರಾವಳಿ

ರೌಡಿ ನಿಗ್ರಹ ದಳದ ಪೊಲೀಸರಿಂದ ಹಳೇ ಆರೋಪಿಗಳಿಬ್ಬರ ಸೆರೆ

Pinterest LinkedIn Tumblr

ಮಂಗಳೂರು : ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲ್ಕಿ, ಬಪ್ಪನಾಡು ಸರಕಾರಿ ಆಸ್ಪತ್ರೆಯ ಬಳಿ ನಿವಾಸಿ ಕೆ.ಎ ಇಬ್ರಾಹಿಂ (62) ಹಾಗೂ ವಾಮಂಜೂರು ಸಮೀಪದ ಕೆತ್ತಿಕಲ್, ತತ್ತರಿಬೆಟ್ಟು ನಿವಾಸಿ ಹಬೀಬುಲ್ಲಾ (32) ಬಂಧಿತ ಆರೋಪಿಗಳು.

ನಗರದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಸುಮಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ದಸ್ತಗಿರಿ ಮಾಡಿದ್ದಾರೆ.

ಮೊದಲನೇ ಆರೋಪಿಯಾದ ಕೆ.ಎ ಇಬ್ರಾಹಿಂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2002 ನೇ ವರ್ಷದಲ್ಲಿ ಈತನ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದು, ಆರೋಪಿಯ ಪತ್ತೆಯ ಬಗ್ಗೆ ಮಾನ್ಯ ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು .ಇದೀಗ ಮುಲ್ಕಿಗೆ ಬಂದ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ದಸ್ತಗಿರಿ ಮಾಡಿರುತ್ತಾರೆ.

ಎರಡನೇ ಆರೋಪಿಯಾದ ಹಬೀಬುಲ್ಲಾ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2007 ನೇ ವರ್ಷದಲ್ಲಿ ಈತನ ಮೇಲೆ ದೊಂಬಿ ಪ್ರಕರಣ ದಾಖಲಾಗಿದ್ದು, ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಯ ಬಗ್ಗೆ ಮಾನ್ಯ ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು .ಮುಂದಿನ ಕ್ರಮದ ಬಗ್ಗೆ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ರವರ ನಿರ್ದೇಶನದಂತೆ, ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಸಿಬ್ಬಂದಿಗಳು ಬಾಗವಹಿಸಿರುತ್ತಾರೆ.

.

Comments are closed.