ಕರಾವಳಿ

ಮಂಗಳೂರಿನ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಅವಘಡ : ಮಾಲ್ ತುಂಬ ಹೊಗೆ – ಪರದಾಡಿದ ಗ್ರಾಹಕರು

Pinterest LinkedIn Tumblr

ಮಂಗಳೂರು, ಫೆಬ್ರವರಿ 21: ನಗರದ ಕೆ.ಎಸ್.ರಸ್ತೆಯಲ್ಲಿರುವ ಸಿಟಿ ಸೆಂಟರ್ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಸಂಭವ್ಯ ಅನಾಹುತವೊಂದು ತಪ್ಪಿದೆ.

ಇಂದು ಮಧ್ಯಾಹ್ನ ಈ ಅಗ್ನಿ ಅವಘಡ ಸಂಭವಿಸಿದ್ದು, ಮಾಲ್ ನ ಎಸಿ ಡಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಘಟನೆಯಿಂದ ಇಡೀ ಮಾಲ್ ಹೊಗೆಮಯವಾಗಿದೆ.

ಸಿಟಿ ಸೆಂಟರ್‌ನ ನಾಲ್ಕನೆ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿ ಈ ಅವಘಡ ಸಂಭವಿಸಿದೆ. ಫುಡ್ ಕೋರ್ಟ್‌ನ ಅಡುಗೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಫುಡ್ ಕೋರ್ಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಿಟಿ ಸೆಂಟರ್ ಮಾಲ್ ತುಂಬಾ ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದ್ದು, ಮಾಲ್‌ನೊಳಗೆ ಆತಂಕಕ್ಕೊಳಗಾಗಿದ್ದ ಭಾರೀ ಸಂಖ್ಯೆಯ ಗ್ರಾಹಕರನ್ನು ಹೊರಗೆ ಕಳುಹಿಸಲಾಗಿದೆ. ಮೂರು ಅಗ್ನಿಶಾಮಕ ದಳ ತಂಡ ಸ್ಥಳದಲ್ಲಿ ಕಾರ್ಯಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.