ರಾಷ್ಟ್ರೀಯ

ಮಾತುಕತೆಯಿಂದಲೇ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಾದರೆ ತಾವೇಕೆ ಮೂರು ಮದುವೆಯಾದಿರಿ: ಇಮ್ರಾನ್’ಗೆ ವರ್ಮಾ ಪ್ರಶ್ನೆ

Pinterest LinkedIn Tumblr

ಮುಂಬೈ: ಕೇವಲ ಮಾತುಕತೆಯಿಂದಲೇ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಾದರೆ ತಾವೇಕೆ ಮೂರು ಮೂರು ಬಾರಿ ಮದುವೆಯಾದಿರಿ ಎಂದು ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪ್ರಶ್ನಿಸಿದ್ದಾರೆ.

ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಈ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಮಾತುಕತೆಯಿಂದಲೇ ಎಲ್ಲ ಸಮಸ್ಯೆ ಪರಿಹಾರವಾಗುತ್ತದೆ. ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಖಂಡಿತಾ ಪಾಕಿಸ್ತಾನ ಕೂಡ ಪ್ರತಿದಾಳಿ ಮಾಡುತ್ತದೆ ಎಂದು ಹೇಳಿದ್ದರು.

ಇಮ್ರಾನ್ ಖಾನ್ ಅವರ ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ತಮ್ಮದೇ ಆದ ಧಾಟಿಯಲ್ಲಿ ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ. 350 ಕೆಜಿ ತೂಕದ ಬಾಂಬ್ ಹೊತ್ತು ದಾಳಿಗೆ ಆಗಮಿಸುವ ಉಗ್ರನೊಂದಿಗೆ ಹೇಗೆ ಮಾತುಕತೆ ನಡೆಸಬೇಕು ಮತ್ತು ಆ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಮೂಕ ಭಾರತೀಯರಿಗೆ ತಿಳಿದಿಲ್ಲ. ದಯಮಾಡಿ ನೀವು ಹೇಳಿಕೊಡಿ. ಬೇಕಿದ್ದರೆ ನಿಮಗೆ ಟ್ಯೂಷನ್ ಫೀಸ್ ಅನ್ನೂ ಕೊಡುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ ಎಲ್ಲ ಸಮಸ್ಯೆಗಳೂ ಮಾತುಕತೆಯಿಂದಲೇ ಬಗೆಹರಿಯುವುದಾದರೆ ತಾವೇಕೆ ಮೂರು ಮೂರು ಮದುವೆಯಾದಿರಿ ಎಂದೂ ಆರ್ ಜಿವಿ ಪ್ರಶ್ನೆ ಮಾಡಿದ್ದಾರೆ.

ತಮ್ಮ ಸರಣಿ ಟ್ವೀಟ್ ನಲ್ಲಿ ಹಲವು ಪ್ರಮುಖ ವಿಚಾರಗಳನ್ನು ಪ್ರಶ್ನೆ ಮಾಡಿರುವ ರಾಮ್ ಗೋಪಾಲ್ ವರ್ಮಾ ನೇರವಾಗಿಯೇ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.