ಕರಾವಳಿ

ವಿಜೃಭಂಣೆಯಲ್ಲಿ ನಡೆದ ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವ

Pinterest LinkedIn Tumblr

ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಬ್ರಹ್ಮ ರಥೋತ್ಸವವು ಮಂಗಳವಾರ ಸಂಜೆ ಶ್ರೀ ಕಾಶಿ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರಾರು ಭಗವತ್ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಮಂಗಳೂರು ರಥೋತ್ಸವ ಪ್ರಯುಕ್ತ ಮಂಗಳವಾರ ಶ್ರೀ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ , ಶತಕಲಶಾಭಿಷೇಕ ಗಳು ಶ್ರೀಗಳವರ ಅಮೃತ ಹಸ್ತ ಗಳಿಂದ ನೆರವೇರಿದವು , ಬಳಿಕ ಯಜ್ಞ ಮಂಟಪದಲ್ಲಿ ಶ್ರೀ ದೇವರು ಛಿತೈಸಿ ಯಜ್ಞ ದ ಲ್ಲಿ ಮಹಾ ಪೂರ್ಣಾಹುತಿ ಜರಗಿತು.

ಈ ಪುಣ್ಯ ಪರ್ವದಂದು ಕಾಶಿ ಮಠಾಧೀಶರ ತಿರುಮಲ ಚಾತುರ್ಮಾಸ ದ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಶ್ರೀಗಳವರ ದಿವ್ಯ ಹಸ್ತ ಗಳಿಂದ ನೆರವೇರಿತು .

Comments are closed.