ಕರಾವಳಿ

ಮಲಬದ್ಧತೆ ನಿವಾರಣೆಗೆ ಪ್ರಕೃತಿಚಿಕಿತ್ಸೆ ಮತ್ತು ಯೋಗಾಭ್ಯಾಸ

Pinterest LinkedIn Tumblr

ಮಲಬದ್ಧತೆ ವಿಷಯ ಚರ್ಚಿಸುವಾಗ ಒಂದೊಂದು ಮನೆಯಲ್ಲಿ ಒಂದೊಂದು ಕತೆ ಇರುತ್ತದೆ. ಪ್ರಕೃತಿಚಿಕಿತ್ಸೆಯಿಂದ, ಯೋಗಾಭ್ಯಾಸದಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು ಎಂಬ ವಿಚಾರ ಹೆಚ್ಚಿನ ಜನರಿಗೆ ಹೊಳೆಯುವುದೇ ಇಲ್ಲ.

ದೇಹ ಯಂತ್ರದಂತೆ ಕೆಲಸ ಮಾಡುತ್ತದೆ. ನೀವು ಎಚ್ಚರವಿರಲಿ ಅಥವಾ ಮಲಗಿರಲಿ ನಿಮ್ಮ ದೇಹದ ಯಂತ್ರ ಕೆಲಸಮಾಡುತ್ತಲೇ ಇರುತ್ತದೆ. ಮಲಬದ್ಧತೆಗೆ ಕಾರಣವನ್ನು ನಾವು ಮನಸ್ಸಿನ ಸ್ಥಿತಿಯಲ್ಲಿ ಹಾಗೂ ಆಹಾರದಲ್ಲಿ ಹುಡುಕಬೇಕು, ಅದನ್ನು ಸರಿಪಡಿಸಬೇಕು.

ಮಲಬದ್ಧತೆಯಿಂದ ಬಹಳ ತೊಂದರೆಗಳಿವೆ. ಶರೀರ ಸುಸ್ತಾಗುತ್ತದೆ, ಹೊಟ್ಟೆ ಭಾರವಾಗುತ್ತದೆ, ತಲೆಯಲ್ಲಿ ನೋವು ಕಾಣುತ್ತದೆ. ಕೆಲಸಲ ನಿದ್ದೆ ಬರುವುದಿಲ್ಲ. ತಲೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಸಿವೆ ಅಡಗಿಹೋಗುತ್ತದೆ. ಇದು ಅನೇಕ ಇತರ ರೋಗಗಳಿಗೆ ಆಮಂತ್ರಣ ಕೂಡ ನೀಡುತ್ತದೆ. ಎಲ್ಲ ರೋಗಗಳ ಮೂಲ ಮೂಲಾಧಾರದಲ್ಲಿದೆ. ಮೂಲಬೇರು ಮಲಬದ್ಧತೆಯಲ್ಲಿದೆ. ಉಂಡ ಅನ್ನ ಪಚನವಾದ ಮೇಲೆ ಅಲ್ಲಿ ಉಳಿದುಕೊಂಡಿರುವ ಮಲ ದೊಡ್ಡ ಕರುಳಿನಿಂದ ಸುಲಭವಾಗಿ ಹೊರಬೀಳದಿದ್ದರೆ ಅದು ಅಲ್ಲೆ ಕೊಳೆಯುತ್ತದೆ. ದುರ್ಗಂಧಕ್ಕೆ ಎಡೆಮಾಡುತ್ತದೆ. ಗ್ಯಾಸ ಆಗುತ್ತದೆ. ಅದು ವಿಷವಾಯು. ಅದು ಎಲ್ಲೆಡೆ ಹರಡುತ್ತದೆ ಮತ್ತು ದೈಹಿಕ ಸ್ವಾಭಾವಿಕ ಕ್ರಿಯೆಗೆ ತಡೆಯೊಡ್ಡುತ್ತದೆ.

ಮಲದ ಸ್ಥಾನ ಕರುಳು. ಕರುಳಿಗೆ ಹೀರುವ ಸ್ವಭಾವವಿರುತ್ತದೆ. ಮಲವು ಸುಲಭವಾಗಿ ಹೊರಬೀಳದಿದ್ದರೆ, ಸ್ನಾಯುಗಳ ಮೇಲೆ ಪರಿಣಾಮವಾಗುತ್ತದೆ, ರಕ್ತ ದೂಷಿತವಾಗುತ್ತದೆ. ಈ ಗತಿ, ಈ ವಿಕೃತಿ, ದಿನಗಟ್ಟಲೆ, ವರುಷಗಟ್ಟಲೆ ಮುಂದುವರಿದರೆ ದೇಹದ ಗತಿಯೇನು? ಮಲಬದ್ಧತೆ ಅಸ್ವಾಭಾವಿಕ. ನಿಸರ್ಗ ನಮಗೆ ಮಲವಿಸರ್ಜನೆ ಮಾಡುವ ಸ್ವಾಭಾವಿಕ ಶಕ್ತಿ ನೀಡಿದೆ. ನಾವು ಅಸ್ವಾಭಾವಿಕ ನಡತೆಯಿಂದ ನಮ್ಮ ದೇಹದ ಯಂತ್ರವನ್ನು ಕೆಡಿಸುತ್ತೇವೆ. ನಾವು ಯೋಗ್ಯ ರೀತಿಯಿಂದ ಆಹಾರ ಸೇವಿಸಿದರೆ ನಾವು ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು.

Comments are closed.