ಕರಾವಳಿ

“ಭಾರತೀಯ ಸೈನಿಕರು ರೇಪಿಸ್ಟ್‌ಗಳು”ಎಂಬ ಹೇಳಿಕೆ ನೀಡಿರುವ ಡಾ.ಕೆ ಶಿವವಿಶ್ವನಾಥನ್ ವಿರುದ್ಧ ಕಾನೂನು ಕ್ರಮಕ್ಕೆ ಎಬಿವಿಪಿ ಆಗ್ರಹ

Pinterest LinkedIn Tumblr

ಮಂಗಳೂರು: ಡಾ.ಕೆ ಶಿವವಿಶ್ವನಾಥನ್ ನೀಡಿರುವ “ಭಾರತೀಯ ಸೈನಿಕರು ರೇಪಿಸ್ಟ್‌ಗಳು” ಎಂಬ ಹೇಳಿಕೆಯನ್ನು ಖಂಡಿಸಿ ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಮಂಗಳೂರು ಘಟಕದ ವತಿಯಿಂದ ದ.ಕ.ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

ಧಾರವಾಡದ ಸುವರ್ಣ ಮಹೋತ್ಸವ ಭವನದಲ್ಲಿ ದಿನಾಂಕ 19.01.2019ರಂದು ಸಾಹಿತ್ಯ ಸಂಭ್ರಮ ಎನ್ನುವ ಹೆಸರಿನ ಕಾರ್ಯಕ್ರಮದಲ್ಲಿ ನಾಗರಿಕತೆ ಮತ್ತು ರಾಷ್ಟ್ರೀಯತೆ ಎಂಬ ಗೋಷ್ಠಿಯಲ್ಲಿ ಸಾಹಿತಿ ಡಾ. ಶಿವ ವಿಶ್ವನಾಥನ್ ದೇಶ ಕಾಯುವ ಸೈನಿಕರನ್ನು ರೇಪಿಸ್ಟ್ ಗಳು ಎನ್ನುವುದರ ಮೂಲಕ ವಿಕೃತಿ ಮೆರೆದಿದ್ದಾರೆ.

ಎಲ್ಲಕ್ಕೂ ಮಿಗಿಲಾದದ್ದು, ದೇಶ ಸರ್ವಸ್ವವನ್ನು ದೇಶಕ್ಕೆ, ಸಮಾಜಕ್ಕೆ ಅರ್ಪಿಸುವ ಯೋಧರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ. ಭಾರವನ್ನು ಪಾಕಿಸ್ತಾನಕ್ಕೆ ಹೋಲಿಸುವುದು ಇತ್ಯಾದಿ ದೇಶದ ಜನರ ಭಾವನೆಗೆ ಧಕ್ಕೆ ತರುವ ಕೆಲಸ ದೇಶದ ಜನರಲ್ಲಿ ಅಶಾಂತಿ ಹುಟ್ಟಿಸುವ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ ಡಾಕ್ಟರ್ ಶಿವ ವಿಶ್ವನಾಥನ್ ವಿರುದ್ಧ ದೇಶದ್ರೋಹಿ ಕಾನೂನಿನಡಿಯಲ್ಲಿ ಗಂಭೀರ ಕ್ರಮ ಜರುಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಭಾರತದ ಗಡಿ ಭಾಗದಲ್ಲಿ ದೇಶ ಕಾಯುವ ಸೈನಿಕರಿಂದಲೇ ಅಲ್ಲಿನ ನಿವಾಸಿಗಳ ಮೇಲೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ ಎಂಬ ಹೇಳಿಕೆ ನೀಡುವ ಮೂಲಕ ಒಂದು ತುಂಬಿದ ಸಭೆಯಲ್ಲಿ ನಮ್ಮ ದೇಶದ ಸೈನ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಡಾ. ಶಿವ ವಿಶ್ವನಾಥನ್ ಅವರು ಮಾಡಿದ್ದಾರೆ.

ನಮ್ಮ ಪವಿತ್ರವಾದ ಭಾರತ ದೇಶವನ್ನು ಪಾಕಿಸ್ತಾನಕ್ಕೆ ಹೋಲಿಸುವುದು ಎಷ್ಟು ಸರಿ. ಒಬ್ಬ ಸಾಹಿತಿಯಾಗಿ ಈ ರೀತಿ ದೇಶ ವಿರೋಧಿ ಮಾತುಗಳನ್ನಾಡುವುದು ಸರಿಯಲ್ಲ. ನಮ್ಮ ದೇಶದ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ದೇಶ ಕಾಯುತ್ತಾರೆ. ಸೈನಿಕರ ಬಗ್ಗೆ ಈ ರೀತಿ ಮಾತನಾಡಿರುವುದನ್ನು ಅಭಾವಿಪ ತಿವ್ರವಾಗಿ ಖಂಡಿಸುತ್ತದೆ ಎಂದು ಎಬಿವಿಪಿ .ತನ್ನ ಮನವಿಯಲ್ಲಿ ತಿಳಿಸಿದೆ.

 ಸಾಹಿತಿ ಡಾ. ಶಿವ ವಿಶ್ವನಾಥನ್ ಅವರು ಭಾರತದ ದೇಶದಲ್ಲಿದ್ದು, ಭಾರತ ದೇಶದ ವಿರುದ್ದ ಹೇಳಿಕೆ ನೀಡುವುದು ದೇಶ ವಿರೋಧಿಗಳಿಗೆ ಸಾಥ್ ನೀಡುವುದು ಎರಡು ಒಂದೇ. ಈ ದೇಶದ್ರೋಹಿ ಹೇಳಿಕೆಗಳನ್ನು ನೀಡಿರುವ ಸಾಹಿತಿ ಡಾ. ಶಿವ ವಿಶ್ವನಾಥನ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಭಾವಿಪದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಕು| ರಿಷ (ಯುನಿವರ್ಸಿಟಿ ಕಾಲೇಜು ಅಧ್ಯಕ್ಷೆ), ಅಭಿಷೇಕ್ ಅಂಚನ್, ದೀಪಕ್, ಪ್ರಕಾಶ್, ಶ್ರೇಯಾ, ಶ್ರೇಯಾ ಪೂಜಾರಿ, ವರ್ಷಿತ, ಕೀರ್ತನ್‌ದಾಸ್ (ಸಹಕಾರ್ಯದರ್ಶಿ) ಕಿರಣ್ ಬೇವಿನಹಳ್ಳಿ (ನಗರಸಂಘಟನಾ ಕಾರ್ಯದರ್ಶಿ), ನಗರ ಕಾರ್ಯದರ್ಶಿವಿಕಾಸ್ ಕಾಟಿಪಳ್ಳ ಮುಂತಾದವರು ಇದ್ದರು.

Comments are closed.