ಕರಾವಳಿ

ಹಿರಿಯ ರಂಗ ಕರ್ಮಿ ವಿ.ಜಿ ಪಾಲ್‌ರವರಿಗೆ ದಿ ಮಾಧವ ಪಿ. ಶಕ್ತಿನಗರ ಸಂಸ್ಮರಣಾ ಪ್ರಶಸ್ತಿ

Pinterest LinkedIn Tumblr

ಮಂಗಳೂರು: ತುಳು ರಂಗಭೂಮಿಯ ಹಿರಿಯ ರಂಗನಟ ನಿರ್ದೇಶಕ ದಿ. ಮಾಧವ ಶಕ್ತಿನಗರ ನೆನಪಿನಲ್ಲಿ ಪದವು ಫ್ರೆಂಡ್ಸ್ ಕ್ಲಬ್ ಶಕ್ತಿ ನಗರ ಪ್ರತಿ ವರ್ಷ ನೀಡುವ 12ನೇ ವರ್ಷದ ದಿ ಮಾಧವ ಶಕ್ತಿ ನಗರ ಸಂಸ್ಮರಣಾ ಪ್ರಶಸ್ತಿ 2019ನ್ನು ಈ ಬಾರಿ ಹಿರಿಯ ರಂಗಕರ್ಮಿ ವಿ.ಜಿ ಪಾಲ್‌ರವರಿಗೆ ಕ್ಲಬ್ಬಿನ 43 ನೇ ವಾರ್ಷಿಕ ಸಂಭ್ರಮದಂದು ಪ್ರದಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯೆ ಅಖಿಲಾ ಆಳ್ವಾ ವಹಿಸಿದ್ದು ಕ್ಲಬ್ಬಿನ ವಿವಿಧ ಯೋಜನೆಗಳ ಬಗ್ಗೆ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ರಂಗದ ಸಾಧಕರನ್ನು ಈ ಸಂದರ್ಭದಲ್ಲಿ ಆರ್ಥಿಕ ನೆರವಿನೊಂದಿಗೆ ಅಭಿನಂದಿಸಲಾಯ್ತು.

ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಗಣೇಶ ಗುಜರನ್, ಅಧ್ಯಕ್ಷ ಕುಶಾಲ್ ಕುಮಾರ್, ಅತಿಥಿಗಳಾದ ಡಾ. ಶ್ಯಾಮ್ ಪ್ರಸಾದ್, ನಾರಾಯಣ ಕೆ, ರವೀಂದ್ರ ರೈ, ರಾಮಕೃಷ್ಣ ಭಟ್ ಹಾಗೂ ಕುವೆಂಪು ಶತಮಾನೋತ್ಸವ ಸ್ಥಳೀಯ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಅಶೋಕ್ ನಾಯಕ್ ವಂದಿಸಿ, ಹರೀಶ್ ಕುಮಾರ್ ರೈ ನಿರೂಪಿಸಿದರು. ಶಾಲಾ ಮಕ್ಕಳಿಂದ ಹಿರಿಯ ರಂಗ ನಟಿ ಶೋಭಾ ಶಕ್ತಿನಗರ ನಿರ್ದೇಶನದಲ್ಲಿ ಎಂ.ಕೆ ಸೀತಾ ರಾಮ್ ಕುಲಾಲ್‌ರವರ ಕನ್ನಡ ನಾಟಕ ಕೃಷ್ಣ ದೇವರಾಯರು ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರ ಅವರಿಂದ ತುಳು ನಾಟಕ `ನಿತ್ಲೆ ಬನ್ನಗ’ ಅಭಿನಯಿಸಲ್ಪಟ್ಟಿತು.

Comments are closed.