ಕರಾವಳಿ

ಜನವರಿ 20ರಂದು ಮಂಗಳೂರಿನಲ್ಲಿ “ಟ್ರಾನ್ಸ್ಫಾರ್ಮಿಂಗ್ ಇಂಡಿಯಾ” ರಾಷ್ಟ್ರೀಯ ಮಟ್ಟದ ಸಮಾವೇಶ

Pinterest LinkedIn Tumblr

ಮಂಗಳೂರು : ಸಿಟಿಜನ್ ಕೌನ್ಸಿಲ್- ಮಂಗಳೂರು ಚಾಪ್ಟರ್ ಮತ್ತು ಪಂಚಾಯತ್ ತಂಡದ ಜೊತೆ ಸೇರಿ “ಟ್ರಾನ್ಸ್ಫಾರ್ಮಿಂಗ್ ಇಂಡಿಯಾ” ಎಂಬ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮಾವೇಶ ಮಾಡಲು ಮುಂದಾಗಿದೆ. ಈ ಸಮಾವೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರದ ಸಾಧನೆಗಳನ್ನು ಚರ್ಚಿಸಲು ಮತ್ತು ಮೌಲ್ಯಮಾಪನ ಮಾಡಲು ದೇಶದಾದ್ಯಂತದ ಇರುವ ಶ್ರೇಷ್ಟ ಭಾಷಣಕಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣ, ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್, ಮೋದಿಜೀಯ ರಾಜತಾಂತ್ರಿಕತೆ (ಮೋದಿ ಡಿಪೆÇ್ಲಮಾಸಿ) ಆಯುಶ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಭಯೋತ್ಪಾದನೆ ವಿರುದ್ಧ ಹೋರಾಟ, ನಕ್ಸಲರು ಮತ್ತು ಎನ್‍ಜಿಓ ಹಾಗೂ ಕರ್ನಾಟಕದ ಅಭಿವೃದ್ಧಿಯಲ್ಲಿ ಮೋದಿ ಸರಕಾರ ಪಾತ್ರ ಈ ವಿಷಯ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.

ಜನವರಿ 20, 2019 ಭಾನುವಾರದಂದು ಮಂಗಳೂರಿನ ಕೋಡಿಯಾಲ್ ಬೈಲ್‍ನ ಟಿ.ವಿ ರಾಮನ್ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಈ ಸಮಾವೇಶ ನಡೆಯಲಿದ್ದು ಮೋದಿ ಸರಕಾರದ ಸಾಧನೆ ಮತ್ತು ಅಭಿವೃದ್ಧಿಗಳ ಬಗ್ಗೆ ಚರ್ಚೆ ನಡೆಯಲಿದೆ.

ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ನಿರ್ದೇಶಕ ಶ್ರೀ ಶಕ್ತಿ ಸಿನ್ಹಾ ನವದೆಹಲಿ ಮೋದಿ ಸರಕಾರದ ರಾಜತಾಂತ್ರಿಕ ಸಾಧನೆಗಳ ಬಗ್ಗೆ ಮಾತನಾಡಲಿದ್ದಾರೆ. ವಿವಿಧ ರಾಷ್ಟ್ರಗಳ ಮತ್ತು ವಿಶ್ವ ನಾಯಕರೊಂದಿಗಿನ ಸಂಬಂಧಗಳನ್ನು ಸುಧಾರಿಸುವುದರೊಂದಿಗೆ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಮತ್ತು ಬಿಐಎಮ್‍ಎಸ್‍ಇಸಿಕೆಗಳನ್ನು ಎದುರಿಸುತ್ತಿರುವ ಭಾರತ-ಪೂರ್ವ ನೀತಿಯ ಬಗ್ಗೆ ಮಾತನಾಡಲಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಶ್ರೀ ಪ್ರತಾಪ್ ಸಿಂಹ ಅವರು ಕರ್ನಾಟಕ ರಾಜ್ಯದ ಒಟ್ಟಾರೆ ಅಭಿವೃದ್ಧಿಯಲ್ಲಿ ಮೋದಿ ಸರಕಾರದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ.

`ಐ ಸಪೋರ್ಟ್ ನಮೋ” ಎಂಬ ದೊಡ್ಡ ಸ್ವಯಂಸೇವಕರ ಬೆಂಬಲ ಗುಂಪಿನ ಸಂಚಾಲಕರಾದ ವಿಕಾಸ್ ಪಾಂಡೆ, ಸಾಫ್ಟ್‍ವೇರ್ ಆರ್ಕಿಟೆಕ್ಟ್, ಇವರು ಇಸ್ಲಾಮಿಕ್ ಭಯೋತ್ಪಾದನೆಹಾಗೂ ಅದರಲ್ಲಿ ನಾವು ಎದುರಿಸುವ ಸವಾಲುಗಳು ನಕ್ಸಲರು ಮತ್ತು ನಗರ ನಕ್ಸಲರು , ಎನ್ಜಿಒಗಳು ಎಡಪಂಥೀಯ ಮಾಧ್ಯಮದಿಂದ ಹೇಗೆ ಬೆಂಬಲಿತಕ್ಕೊಳಪಟ್ಟಿದ್ದಾರೆ ಎಂಬುವುದರ ಬಗ್ಗೆ ಈ ಸಮಾವೇಶದಲ್ಲಿ ಮಾತನಾಡಲಿದ್ದಾರೆ.

ಓಪ್ ಇಂಡಿಯಾ ಡಾಟ್ ಕಾಂನ ಅಂಕಣಕಾರ, ವೃತ್ತಪತ್ರಿಕೆಯ ಬರಹಗಾರ, ಬ್ಲಾಗರ್ ಮತ್ತು ಕಂಪೆನಿ ಕಾರ್ಯದರ್ಶಿಯಾಗಿರುವ ಶ್ರೀ ಅಶುತೋಷ್ ಮುಗ್ಲಿಕಾರ್ ಅವರು ಜಿಎಸ್ಟಿ, ನೋಟು ಅಮಾನ್ಯೀಕರಣದ ಮೇಲೆ ಆದ ಪರಿಣಾಮ, ಮೋದಿ ಸರಕಾರದಿಂದ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಮಾಮಿ ಗಂಗೇ, ಸ್ವಚ್ ಭಾರತ್, ಉಜ್ಜಲಾ ಯೋಜನಾ, ಬೇಟಿ ಬಚಾವೊ ಬೇಟಿ ಪಡಾವೋ ಎಂಬ ಪ್ರಧಾನಿ ಮೋದಿಯವರ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ.

ಶ್ರೀ ಅನುರಾಗ್ ದೀಕ್ಷಿತ್, ಭಾಷಣಕಾರ, ಬ್ಲಾಗರ್, ಡಿಜಿಟಲೈಶೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬರಹಗಾರಾಗಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ ಡಿಜಿಟಲ್ ಇಂಡಿಯಾ, ಸೈನ್ಯದಲ್ಲಿ ಮೋದಿ ಸರಕಾರದ ಪಾತ್ರ, ಮಿಲಿಟರಿ ಖರೀದಿಗಳ ಬಗ್ಗೆ ಮೇಕ್ ಇಂಡಿಯಾದ ಪಾತ್ರ ಈ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಿದ್ದಾರೆ.

ಈ ಸಮಾವೇಶಕ್ಕೆ ಎಲ್ಲರನ್ನೂ ಆಹ್ವಾನಿಸಲಾಗಿದ್ದು 9.00 ಗಂಟೆಗೆ ಸಮಾವೇಶ ಆರಂಭವಾಗಲಿದೆ.
ಭಾನುವಾರ: 20-01-2019
ಸ್ಥಳ: ಟಿ ವಿ ರಾಮನ್ ಪೈ ಕನ್ವೆನ್ಷನ್ ಸೆಂಟರ್,
ಕೊಡಿಯಾಲ್‍ಬೈಲ್, ಮಂಗಳೂರು -575003

Comments are closed.