ಕರಾವಳಿ

ಪಚ್ಚನಾಡಿ ಬಳಿ ಬಸ್‌ ಬ್ರೇಕ್ ಫೈಲ್ : ಕಾರು, ಟೆಂಪೋ, ಬೈಕ್‌ಗೆ ಢಿಕ್ಕಿ : 12 ಮಂದಿಗೆ ಗಾಯ

Pinterest LinkedIn Tumblr

ಮಂಗಳೂರು, ಡಿಸೆಂಬರ್. 22: ಶನಿವಾರ ಸಂಜೆ ಪಚ್ಚನಾಡಿ ಸೇತುವೆ ಸಮೀಪ ನಡೆದ ಸರಣಿ ಅಪಘಾತದಲ್ಲಿ 12 ಮಂದಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಸಂಜೆ ಪದವಿನಂಗಡಿ ಸಮೀಪದ ಪಚ್ಚನಾಡಿ ಸೇತುವೆ ಬಳಿ ಖಾಸಗಿ ಬಸ್‌ವೊಂದು ಬ್ರೇಕ್ ಫೈಲ್ ಆಗಿ ಕಾರು, ಟೆಂಪೋ, ಬೈಕ್‌ಗೆ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಜಯಂತ್, ಕೂಸಪ್ಪ, ಅಬ್ದುಲ್ ರಹ್ಮಾನ್, ಮಾರ್ಷಲ್ ಮೆನೇಜಸ್, ಗ್ರೆಗೋರಿ, ಅಭಿನವ್, ಮುಕುಂದ ಭಟ್, ಮ್ಯಾಕ್ಸಿಲ್, ಪ್ರಜ್ವಲ್ ಫೆರ್ನಾಂಡೀಸ್, ಕರುಣಾಕರ ಶೆಟ್ಟಿ, ಮಹಾಲಿಂಗ ಮುಂತಾದವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೊಳಪಡಿಸಲಾಗಿದೆ.

14 ರೂಟ್ ನಂಬರಿನ ಖಾಸಗಿ ಬಸ್ ಪದವಿನಂಗಡಿ ಕಡೆಯಿಂದ ಪಚ್ಚನಾಡಿಗೆ ತೆರಳುತ್ತಿದ್ದಾಗ ರೈಲ್ವೆ ಟ್ರ್ಯಾಕ್ ಸಮೀಪದ ಎತ್ತರ ಪ್ರದೇಶದಲ್ಲಿ ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಎದುರಿನಲ್ಲಿ ಚಲಿಸುತ್ತಿದ್ದ ಕಾರಿಗೆ ಹಾಗೂ ಟೆಂಪೋ, ಬೈಕ್ ಢಿಕ್ಕಿಯಾಗಿ ಎದುರಿನಲ್ಲಿದ್ದ ಹೊಂಡಕ್ಕೆ ಬಿದ್ದು ನಿಂತಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Comments are closed.