ಕರಾವಳಿ

ಮಾಧ್ಯಮಗಳ ಬಳಕೆ ಧನಾತ್ಮಕ ರೀತಿಯಲ್ಲಿರಲಿ : ಎಸ್ಐ ಪ್ರದೀಪ್.ಪಿ.ಆರ್

Pinterest LinkedIn Tumblr

ಮಂಗಳೂರು : ಮಂಗಳೂರು: ಸಮೂಹ ಮಾಧ್ಯಮಗಳನ್ನು ಧನಾತ್ಮಕ ರೀತಿಯಲ್ಲಿ ಬಳಸುವುದರ ಮೂಲಕ ಅನೇಕ ವಿಚಾರಗಳನ್ನು ಅರಿಯಲು ಸಾಧ್ಯ. ಮಾಧ್ಯಮಗಳ ಬಳಕೆ ಕಾನೂನಿನ ಚೌಕಟ್ಟಿನೊಳಗಿರಲಿ ಎಂದು ಮಂಗಳೂರು ಬಂದರು ಠಾಣೆಯ ಪಿ.ಎಸ್.ಐ ಪ್ರದೀಪ್.ಪಿ.ಆರ್ ಹೇಳಿದರು.

ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು,ರಥಬೀದಿ ಕಾಲೇಜಿನ ಯುವ ರೆಡ್ ಕ್ರಾಸ್ ವತಿಯಿಂದ ಜರಗಿದ ‘ಅಪರಾಧ ತಡೆ ಮಾಸಾಚರಣೆ 2018’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್.ಸಿ, ಅವರು ಯುವಜನಾಂಗವು ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಉತ್ತಮ ನಾಗರಿಕರಾಗಲು ಸಾಧ್ಯ‌ ಎಂದರು.

ಮಂಗಳೂರು ಬಂದರು ಠಾಣೆಯ ಸಿಬ್ಬಂದಿಗಳಾದ ಮಹೇಶ್ ಮತ್ತು ಈಶ ಪ್ರಸಾದ್, ಕಾಲೇಜಿನ ಉಪನ್ಯಾಸಕರಾದ ಡಾ.ಶಿವರಾಮ್ ಪಿ., ಯುವ ರೆಡ್‌ಕ್ರಾಸ್ ಕಾರ್ಯಕ್ರಮದ ಅಧಿಕಾರಿ ಡಾ.ಮಹೇಶ್ ಕೆ,ಬಿ. ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಕೆ. ಕಾರ್ಯಕ್ರಮ ನಿರೂಪಿಸಿದರು.

Comments are closed.