ಪ್ರಮುಖ ವರದಿಗಳು

ಭಾರೀ ವೈರಲ್ ಆಗುತ್ತಿರುವ ಈ ಫೋಟೋವಿನ ಹಿಂದಿದೆ ದೊಡ್ಡ ದುಃಖದ ಕಥೆ !

Pinterest LinkedIn Tumblr

ಶ್ರೀನಗರ: ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಸಾವಿನ ಬೆನ್ನಲ್ಲೇ ದುಃಖತಪ್ತ ತಂದೆಯನ್ನು ಮತ್ತೋರ್ವ ಯೋಧ ಅಪ್ಪಿ ಸಮಾಧಾನ ಮಾಡುತ್ತಿರುವ ಫೋಟೋ ಈಗ ವೈರಲ್ ಆಗುತ್ತಿದೆ.

ಈ ಹಿಂದೆ ಉಗ್ರ ಸಂಘಟನೆಯಲ್ಲಿ ಪಾಲ್ಗೊಂಡು ಬಳಿಕ ಸೇನೆ ಸೇರಿ ಯೋಧನಾಗಿ ಬದಲಾಗಿದ್ದ ಲ್ಯಾನ್ಸ್ ನಾಯಕ್ ವಾನಿ ಅವರು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದ್ದ ಈ ಎನ್ ಕೌಂಟರ್ ನಲ್ಲಿ ಇತರೆ ಮೂವರು ಅಧಿಕಾರಿಗಳು ಕೂಡ ಗಾಯಗೊಂಡಿದ್ದರು. ಬಳಿಕ ಹುತಾತ್ಮ ಯೋಧ ವಾನಿ ಅವರನ್ನು ಅವರ ಹುಟ್ಟೂರಾದ ಕುಲ್ಗಾಮ್ ಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.

ಈ ವೇಳೆ ತೀವ್ರ ದುಃಖಿತರಾಗಿದ್ದ ವಾನಿ ಅವರ ತಂದೆಯನ್ನು ಯೋಧರೊಬ್ಬರು ಅಪ್ಪಿ ಸಮಾಧಾನ ಪಡಿಸಿದ್ದರು. ಈ ದೃಶ್ಯದ ಫೋಟೋ ತೆಗೆದಿದ್ದ ಕೆಲವರು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿ ಅದಕ್ಕೆ ನೀವು ಏಕಾಂಗಿ ಅಲ್ಲ.. ನಿಮ್ಮೊಂದಿಗೆ ಭಾರತೀಯ ಸೇನೆ ಮತ್ತು ಸೈನಿಕರಿದ್ದಾರೆ ಎಂಬ ಅಡಿ ಬರಹ ಬರೆಯಲಾಗಿತ್ತು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, 3 ಸಾವಿರಕ್ಕೂ ಅಧಿಕ ಲೈಕ್ ಗಳು ಮತ್ತು 997 ಬಾರಿ ರಿಟ್ವೀಟ್ ಆಗಿದೆ. ಅಂತೆಯೇ ವಾನಿ ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಹಲವು ಟ್ವೀಟ್ ಮಾಡಿದ್ದಾರೆ.

Comments are closed.