ಕರಾವಳಿ

ಪಂಪ್ ವೆಲ್ ಸರ್ಕಲ್ ಮೇಲ್ಸೇತುವೆ ಫೆಬ್ರವರಿಯಲ್ಲಿ ಲೋಕಾರ್ಪಣೆ : ಸಂಸದ ನಳಿನ್ ಕುಮಾರ್ ಕಟೀಲು

Pinterest LinkedIn Tumblr

ಮಂಗಳೂರು: ನಗರದ ಪಂಪ್ ವೆಲ್ ಸರ್ಕಲ್ ಬಳಿಯ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ ಫೆಬ್ರವರಿಯಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ತೊಕ್ಕೊಟ್ಟಿನ ಮೇಲ್ಸೇತುವೆಗೆ ಸಂಬಂಧಪಟ್ಟಂತೆ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಲಸವಷ್ಟೇ ಬಾಕಿ ಉಳಿದಿದ್ದು ಡಿಸೆಂಬರ್ ಅಂತ್ಯದ ವೇಳೆ ಪೂರ್ಣಗೊಳ್ಳಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಪಂಪ್ ವೆಲ್ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಇದೇ ವೇಳೆ ಕಾಮಗಾರಿ ತಡವಾಗಲು ಕಾರಣವಾದ ಅಂಶಗಳ ಬಗ್ಗೆ ವಿವರಿಸುತ್ತಾ, ರಾಜ್ಯ ಸರಕಾರ ರಸ್ತೆ ಬದಿ ಇದ್ದ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿಫಲವಾಗಿದೆ. ಪಂಪ್ ವೆಲ್ ಸರ್ಕಲ್ ನ ಕಳಶ ಸ್ಥಳಾಂತರ ಹಾಗೂ ಬಳಿಯಲ್ಲೇ ಸರ್ವಿಸ್ ಬಸ್ ನಿಲ್ದಾಣದ ಡಿಸೈನ್ ನಲ್ಲಿ ಆಗಾಗ ಮಾರ್ಪಾಟು ಮಾಡಿದ ಹಿನ್ನೆಲೆಯಲ್ಲಿ ಮೇಲ್ಸೇಸುತುವೆ ಯ ಡಿಸೈನ್ ನಲ್ಲೂ ಬದಲಾವಣೆ ಮಾಡುವಂತಾಯಿತು. ಈ ನಿಟ್ಟಿನಲ್ಲಿ ಕಾಮಗಾರಿ 2010 ಕ್ಕೆ ಪ್ರಾರಂಭಗೊಂಡರೂ ನಿಜವಾದ ಕಾಮಗಾರಿ ಆರಂಭಗೊಂಡಿದ್ದು 2016 ರ ಬಳಿಕವೇ. ಆದ್ದರಿಂದ ಕಾಮಗಾರಿ ವಿಳಂಬಕ್ಕೆ ಆಗಿನ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಮಂತ್ರಿಗಳೇ ಕಾರಣಕರ್ತರು ಎಂದರು.

ಈ ನಡುವೆ ಮೇಲ್ಸೇಸುತುವೆ ಕಾಮಗಾರಿ ವಹಿಸಿಕೊಂಡ ನವಯುಗ ಕಂಪೆನೂ ಆರ್ಥಿಕ ಅಡಚಣೆಗೆ ಒಳಗಾದ್ದರಿಂದ ಸ್ವಲ್ಪ ಸಮಯ ಕಾಮಗಾರಿ ವೇಗ ಕಳೆದುಕೊಂಡಿತು. ಆದರೆ ಇದೀಗ ಸಮಸ್ಯೆಗಳೆಲ್ಲವೂ ಇತ್ಯರ್ಥಗೊಂಡಿರುವ ಕಾರಣ ತೊಕ್ಕೊಟ್ಟು ಮೇಲ್ಸೇಸುತುವೆ ಜನವರಿಯಲ್ಲಿ ಹಾಗೂ ಪಂಪ್ ವೆಲ್ ಮೇಲ್ಸೇಸುತುವೆ ಫೆಬ್ರವರಿ ಯ ವೇಳೆ ಲೋಕಾರ್ಪಣೆಗೊಳ್ಳಲಿದೆ ಎಂದರು.

ಎನ್ಎಂಪಿಟಿ, ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ಬೇಡಿಕೆಯ ಬಗ್ಗೆ ತಿಳಿಸಿದ ಅವರು ಟೋಲ್ ಗೇಟನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ನನ್ನ ಸಮ್ಮತಿ ಇಲ್ಲ. ಬದಲಾಗಿ ಪಾಣೆಮಂಗಳೂರು ಹಾಗೂ ಸುರತ್ಕಲ್ ಟೋಲ್ ಗೇಟನ್ನು ಮುಚ್ಚಬೇಕು ಎಂಬುದೇ ನನ್ನ ಒತ್ತಾಯ. ಈ ಬಗ್ಗೆ ಕೇಂದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೂ ಈ ವಿಷಯ ತಿಳಿಸಲಾಗಿದೆ. ಪ್ರಾದೇಶಿಕ ಅಧಿಕಾರಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ವರದಿ ನೀಡಿ ಈ ಎರಡೂ ಟೋಲ್ ಗೇಟ್ ಗಳನ್ನು ಮುಚ್ಚಬೇಕೆಂದು ಆಗ್ರಹಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ರಾಜ್ಯ ಸರಕಾರವೂ ಕೇಂದ್ರಕ್ಕೆ ಪತ್ರ ಬರೆದು ಟೋಲ್ ಗೇಟ್ ಮುಚ್ಚಲು ವಿನಂತಿಸಿದರೆ, ಬೇಡಿರಕೆ ಈಡೇರುವ ಸಾಧ್ಯತೆ ಇದೆ ಎಂದವರು ತಿಳಿಸಿದರು.

Comments are closed.