ಕರಾವಳಿ

ಕಾರ್ಕಳ ಅವಿಲ್ ಡಿಸೋಜಾ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: 8 ತಿಂಗಳ ಬಳಿಕ ಬಳಿಕ ಬಯಲಾಯ್ತು ಕೊಲೆ ರಹಸ್ಯ

Pinterest LinkedIn Tumblr

ಉಡುಪಿ: ಕಾರ್ಕಳ ತಾಲೂಕಿನ ಮಿಯ್ನಾರು ಮಂಗಲ್ಪಾದೆಯ ನಿವಾಸಿ ಅವಿಲ್‌ ಡಿಸೋಜಾ (24) ನಾಪ್ತತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆತನ ಅಣ್ಣ ಮೆಲ್ವಿನ್‌ ಸಂತೋಷ್‌ ಡಿ”ಸೋಜಾ (31) ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. 2018ರ ಮಾ. 30ರಂದು ಮಿಯ್ನಾರು ಮಂಗಲ್ಪಾದೆ ಮನೆಯಿಂದ ಅವಿಲ್‌ ಡಿಸೋಜಾ ನಾಪತ್ತೆಯಾಗಿದ್ದಾನೆ ಎಂದು ಅವರ ತಂದೆ ಅಲ್ಬರ್ಟ್‌ ಡಿ”ಸೋಜಾ ನಗರ ಠಾಣೆಗೆ ದೂರು ನೀಡಿದ್ದರು.

ಪ್ರಾರಂಭದಲ್ಲೇ ಈ ಪ್ರಕರಣದಲ್ಲಿ ಕೆಲವು ಅನುಮಾನಗಳತ್ತು. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ಅಣ್ಣ ಮೆಲ್ವಿನ್‌ ಸಂತೋಷ್‌ನನ್ನು ವಶಕ್ಕೆ ಪಡೆದು ಕೂಲಂಕಷ ತನಿಖೆ ನಡೆಸಿದ್ದು, ಆತ ಕೃತ್ಯ ಎಸಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಘಟನೆ ವಿವರ: ಮಾ. 30ರಂದು ರಾತ್ರಿ 10 ಗಂಟೆಗೆ ಮಿಯ್ನಾರಿನ ಮಂಗಲ್ಪಾದೆಯ ಅವರ ಮನೆಯಲ್ಲಿ ತಾಯಿಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ವೇಳೆ ಮೆಲ್ವಿನ್‌ ಸಂತೋಷ್‌ ಡಿಸೋಜಾ ಅವಿಲ್‌ ಡಿ’ಸೊಜಾನಿಗೆ ಚೂರಿಯಿಂದ ಇರಿದು ಕಬ್ಬಿಣ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಅ‌ನಂತರ ಮೃತದೇಹವನ್ನು ನಗರದ ರಾಮಸಮುದ್ರ ದಡಕ್ಕೆ ಕೊಂಡೊಯ್ದು ಅಲ್ಲಿ ಸುಟ್ಟು ಸಾಕ್ಷ್ಯ ನಾಶ ಪಡಿಸಿದ್ದಾನೆ. ಈ ಎಲ್ಲಾ ವಿಚಾರಗಳನ್ನು ಸಂತೋಷ್‌ ಪೊಲೀಸ್‌ ತನಿಖೆಯ ವೇಳೆ ತಿಳಿಸಿದ್ದಾನೆ. ಆರೋಪಿ ಸಂತೋಷ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.