ಶಿವಮೊಗ್ಗ: ‘ಸದ್ಯದಲ್ಲೇ ಮೀಟೂ ಆರೋಪದಲ್ಲಿ ಸಿಎಂ ಕುಮಾರಸ್ವಾಮಿ ಸಿಕ್ಕಿಹಾಕಿಕೊಳ್ಳಲಿದ್ದಾರೆ’ ಎಂದು ಶಾಸಕ ಕುಮಾರ್ ಬಂಗಾರಪ್ಪ ಶಿವಮೊಗ್ಗದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಸುಳ್ಳಿನ ಕಂತೆ ಹೇಳುತ್ತಿದ್ದಾರೆ. ಸುಳ್ಳಿಗೆ ಯಾವತ್ತೂ ಸಾಕ್ಷಿಗಳಿರುವುದಿಲ್ಲ. ಇದೇ ತರದ ಮಾತುಗಳನ್ನು ಆಡಿದ್ರೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ನೀವು ಅನೇಕ ಕಡೆ ಸಾಕ್ಷಿ ಸಮೇತ ಮಾತನಾಡಿದ್ದೀರೋ, ಎಲ್ಲಾದರೂ ನೀವು ಹೆಚ್ಚು ಕಮ್ಮಿ ಮಾತನಾಡಿದ್ದರೆ ಮೀಟೂ ನಲ್ಲಿ ನೀವು ಪ್ರಸ್ತಾಪ ಆಗ್ತೀರಾ. ಮೀಟೂ ನಲ್ಲಿ ನೀವು ನೇರವಾಗಿ ಬಂದು ಸಿಕ್ಕಿ ಹಾಕಿಕೊಳ್ಳುತ್ತೀರಿ ಅಂತಹ ಕೆಲಸಗಳನ್ನು ನೀವು ಮಾಡಿದ್ದೀರಾ
ಶಿವಮೊಗ್ಗಕ್ಕೆ ಬಂದಾಗ ಮಾತ್ರ ಬಂಗಾರಪ್ಪ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದೀರಿ. ನಿಜವಾದ ಕಾಳಜಿ ಇದ್ರೆ ಬಂಗಾರಪ್ಪ ಅವರ ಕೊಡುಗೆಗಳ ಬಗ್ಗೆ ಮಾತಾನಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
Comments are closed.