ಕರಾವಳಿ

ಬೈಂದೂರು ಪೊಲೀಸರ ಕಣ್ತಪ್ಪಿಸಿ ‘ಪೋಕ್ಸೋ’ ಪ್ರಕರಣದ ವಿಚಾರಣಾಧೀನ ಖೈದಿ ಎಸ್ಕೇಪ್!

Pinterest LinkedIn Tumblr

ಕುಂದಾಪುರ: ಎರಡು ತಿಂಗಳ ಹಿಂದೆ ನಡೆದಿದ್ದ ಪೋಕ್ಸೋ ಪ್ರಕಣವೊಂದರ ವಿಚಾರಣಾಧೀನ ಖೈಧಿಯೋರ್ವ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಬಂಧಿಯಾಗಿದ್ದ ಗೋಳಿಹೊಳೆ ನಿವಾಸಿ ಸುರೇಶ್ ನಾಯ್ಕ್ (26) ಪರಾರಿಯಾದ ವಿಚಾರಣಾಧೀನ ಖೈದಿ. ಕಾರವಾರ ಕಾರಾಗೃಹದಿಂದ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿ ಮರಳಿ ಕಾರವಾರ ಕಾರಾಗೃಹಕ್ಕೆ ರೈಲಿನಲ್ಲಿ ಓರ್ವ ಹೆಡ್ ಕಾನ್ಸ್ಟೇಬಲ್ ಹಾಗೂ ಓರ್ವ ಕಾನ್ಸ್ಟೇಬಲ್ ಜೊತೆ ಪ್ರಯಾಣಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ರೈಲು ಬೈಂದೂರು ಸಮೀಪಿಸುತ್ತಿದ್ದಂತೆ ವಾಂತಿ ಬರುವುದುದಾಗಿ ಪೊಲೀಸರಲ್ಲಿ ಸುಳ್ಳು ಹೇಳಿ ಆರೋಪಿ ಪರಾರಿಯಾಗಿದ್ದಾನೆ.

ಎರಡು ತಿಂಗಳ ಹಿಂದೆ ಆರೋಪಿ ಸುರೇಶ್ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದನು. ನೊಂದ ಯುವತಿ ಆರೋಪಿ ವಿರುದ್ದ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬೈಂದೂರು ಪೊಲೀಸರು ಕ್ಷಿಪ್ರಗತಿಯಲ್ಲಿ ಆರೋಪಿ ಸುರೇಶ್ ನಾಯ್ಕ್ ನನ್ನು ಬಂಧಿಸಿದ್ದರು. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಆರೋಪಿ ಕಾರಾವರ ಕಾರಾಗೃಹದಲ್ಲಿದ್ದನು.

(ವರದಿ- ಯೋಗೀಶ್ ಕುಂಭಾಸಿ)

Comments are closed.