ಕರಾವಳಿ

ವಿಎಚ್‌ಪಿ ಮುಖಂಡ ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣ : ಮೂವರ ಬಂಧನ

Pinterest LinkedIn Tumblr

ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಹರೀಶ್ ಶೆಟ್ಟಿ

ಮಂಗಳೂರು, ಅಕ್ಟೋಬರ್. 03: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರದಲ್ಲಿ ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಹರೀಶ್ ಶೆಟ್ಟಿಯವರ ಮೇಲೆ ಹಲ್ಲೆ ನೆಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಕಲಾಯಿ ಮದೀನಾ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ಶರೀಫ್ ಯಾನೆ ಶರೀಫ್(24 ), ಬಜಪೆ ಕಂದಾವರ ಗ್ರಾಮದ ನಿವಾಸಿಗಳಾದ ಶಿಫಾಜ್ (21 ) ಹಾಗೂ ಮೊಹಮ್ಮದ್ ಆರಿಫ್ (28 ) ಎಂದು ಗುರುತಿಸಲಾಗಿದೆ.

ದಿನಾಂಕ 24.09.2018 ರಂದು ಮಂಗಳೂರು ಹೊರವಲಯದ ಬಜಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಎಂಬವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತಿದ್ದ ವೇಳೆ ಸೂರಲ್ಪಾಡಿ ಬಳಿಯಲ್ಲಿ ಮೋಟಾರ್ ಸೈಕಲ್ ನಲ್ಲಿ ಮಾರಾಕಾಯುಧಗಳೊಂದಿಗೆ ಬಂದ ವ್ಯಕ್ತಿಗಳು ಹರೀಶ್ ಶೆಟ್ಟಿಯವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಿದ್ದು ಇದರಲ್ಲಿ ಬಜಪೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿರುತ್ತಾರೆ.

ಬಂಧಿತ ಆರೋಪಿಗಳಿಂದ ಕೆ. ಎ. 19 EL 0985 ನೇ ನಂಬ್ರದ ಎಫ್ ಝೆಡ್ ಮೋಟಾರ್ ಸೈಕಲ್ ಒಂದನ್ನು ಸ್ವಾಧೀನ ಪಡಿಸಿಳ್ಳಲಾಗಿದೆ. ಪ್ರಕರಣದ ತನಿಖೆಯ ವೇಳೆ ಇನ್ನೂ ಹೆಚ್ಚಿನ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದ್ದು, ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್‌ ರವರ ಆದೇಶದಂತೆ ಉಪಪೊಲೀಸ್‌ ಆಯುಕ್ತರಾದ ಶ್ರೀಮತಿ ಉಮಾ ಪ್ರಶಾಂತ ರವರ ನಿರ್ದೇಶನದಂತೆ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್‌‌. ರವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ರಫೀಕ್.ಕೆ.ಎಂ, ಸಿಸಿಬಿ ಘಟಕದ ಪೊಲಿಸ್ ನಿರೀಕ್ಷಕರಾದ ಶಾಂತರಾಮ ಮತ್ತು ಅವರ ಸಿಬ್ಬಂದಿಗಳು, ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ /ಸಿಬ್ಬಂಧಿಗಳಾದ ಎ.ಎಸ್. ಐ. ಶ್ರೀ ಮೊಹಮ್ಮದ್ ಬಜಪೆ, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯಕಾಂಚನ್, ಇಸಾಕ್ , ರಾಧಾಕೃಷ್ಣ, ಶರಣ್ ಕಾಳಿ ಇವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Comments are closed.