ಕರಾವಳಿ

ಅ.15ರ ಒಳಗೆ ಕರಾವಳಿ ಜಿಲ್ಲೆಯಲ್ಲಿ ಮರಳು ಸಿಗುವಂತೆ ಕ್ರಮಕೈಗೊಂಡ ಸಿಎಂ

Pinterest LinkedIn Tumblr

ಬೆಂಗಳೂರು: ನಿನ್ನೆ ವಿಧಾನಸೌಧದ 3ನೇ ಮಹಡಿಯಲ್ಲಿ ಕರಾವಳಿ ಜಿಲ್ಲೆಯ ಶಾಸಕರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ಸಭೆ ನಡೆದು ಕರಾವಳಿ ಜಿಲ್ಲೆಯ ಮರಳು ಸಮಸ್ಯೆ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಗಣಿ ಮತ್ತು ಭೂವಿಜ್ಞಾನ ಮಂತ್ರಿ ರಾಜಶೇಖರ್ ಪಾಟೀಲ್, ಸಚಿವರಾದ ರೇವಣ್ಣ, ಯು.ಟಿ ಖಾದರ್, ಡಾ. ಜಯಮಾಲ ಮತ್ತು ಅವಳಿ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.

ಉಡುಪಿ ಮಂಗಳೂರು ಜಿಲ್ಲೆಯಲ್ಲಿ ಭುಗಿಲೆದ್ದ ಮರಳು ಸಮಸ್ಯೆ ಕುರಿತು ಜನಪ್ರತಿನಿಧಿಗಳಿಂದ ಆಕ್ರೋಶದ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಎಲ್ಲಾ ಸರ್ವೆಗಳನ್ನು ಮುಗಿಸಿ ಸಿ.ಆರ್. ಝಡ್ ವ್ಯಾಪ್ತಿಯಲ್ಲಿ ಅಕ್ಟೋಬರ್ 15 ರೊಳಗೆ ಸಾಮಾನ್ಯ ಜನರಿಗೆ ಮರಳು ಸಿಗುವಂತೆ ಆದೇಶ ನೀಡಿದರು.

ಕಂದಾಯ ಇಲಾಖೆಯ ಸಮಸ್ಯಗಳಾದ 9/11, ಇ .ಸ್ಕೆಚ್, ಭೂ ಪರಿವರ್ತನೆಯ ಬಗ್ಗೆ ಒಂದು ವಾರದಲ್ಲಿ ಅವಳಿ‌ ಜಿಲ್ಲೆಯ ಕಂದಾಯ ಸಮಸ್ಯೆ ಪರಿಹರಿಸಲು ಅಧಿಕಾರಿಗಳನ್ನು ಕಳುಹಿಸಿ ಕೊಡುವುದಾಗಿ ಸೂಚಿಸಿದರು.

Comments are closed.