ಕರಾವಳಿ

ಕರಾವಳಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಯುವಜನ ಮೇಳ / ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಜೀವನದಲ್ಲಿ ಗೆಲುವು ಸಾಧ್ಯ : ಎಸ್.ಗಣೇಶ್ ರಾವ್

Pinterest LinkedIn Tumblr

ಮಂಗಳೂರು : ಸೋಲುಗಳು ಗೆಲುವಿನ ಮೆಟ್ಟಿಲೇರಲು ಅಡಿಪಾಯ ಇದ್ದಂತೆ. ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಜೀವನದಲ್ಲಿ ಗೆಲುವು ಸಾಧ್ಯ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್. ಎಜ್ಯುಕೇಶನ್ ಟ್ರಸ್ಟ್(ರಿ)ನ ಸ್ಥಾಪಕಾ ಧ್ಯಕ್ಷರಾದ ಶ್ರೀ ಎಸ್. ಗಣೇಶ್ ರಾವ್‌ರವರು ನಗರದ ಪ್ರತಿಷ್ಠಿತ ಕರಾವಳಿ ಕಾಲೇಜಿನ ಇಂಟೀರಿಯರ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ವಿಭಾಗಗಳ ಸಹಯೋಗದೊಂದಿಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಯುವ ಡಿಸೈನ್ ಫಿಯೆಸ್ಟಾ 2018 ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಮುಂದುವರೆದು, ವಿದ್ಯಾರ್ಥಿ ಯುವಜನರಲ್ಲಿ ಸಾಧಿಸುವ ಶಕ್ತಿ ಮತ್ತು ಛಲವಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಔನತ್ಯಕ್ಕೇರಬೇಕು. ಜೀವನವನ್ನು ಆನಂದಿಸುವುದರೊಂದಿಗೆ ಸ್ಪಷ್ಟ ಗುರಿ ಇಟ್ಟುಕೊಂಡು ಗುರಿ ತಲುಪಲು ಶ್ರಮಿಸಬೇಕು. ಸಾಗುವ ದಾರಿಯಲ್ಲಿ ಸೋಲುಗಳು ಬಂದರೂ ಎದೆಗುಂದದೇ ಆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಹಾಗಿದ್ದಲ್ಲಿ ಅಂತಿಮವಾಗಿ ಗೆಲುವೇ ಜೊತೆಯಾಗುತ್ತದೆ ಎಂದರು ಹೇಳಿದರು.

ಸ್ಪರ್ಧೆಯ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಈ ವೇಳೆ ಎಸ್. ಗಣೇಶ್ ರಾವ್‌ ಅವರು ಅನಾವರಣಗೊಳಿಸಿದರು.

ಬಳಿಕ ಫ್ಯಾಶನ್ ಶೋ, ಜಾನಪದ ನೃತ್ಯ, ವೆಸ್ಟರ್ನ್ ನೃತ್ಯ, ಫ್ಲವರ್ ಎರೇಂಜ್‌ಮೆಂಟ್ಸ್, ಕ್ಲೇ ಮಾಡೆಲಿಂಗ್, ಹೇರ್ ಸ್ಟೈಲಿಂಗ್, ಪೆನ್ಸಿಲ್ ಸ್ಕೆಚಿಂಗ್, ಬೆಸ್ಟ್ ಔಟ್ ಆಫ್ ವೇಸ್ಟ್ ಮುಂತಾದ ಸ್ಪರ್ಧೆಗಳು ಜರಗಿದವು.

ಕಾರ್ಯಕ್ರಮವನ್ನು ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಶ್ರೀಮತಿ ಲತಾ ಜಿ. ರಾವ್ ಉದ್ಘಾಟಿಸಿದರು.

ಕರಾವಳಿ ಕಾಲೇಜುಗಳ ಸಮೂಹದ ಪ್ರಾಂಶುಪಾಲರುಗಳಾದ ಪ್ರೊ. ಚಾವಡಿ ಸುರೇಶ್ ಬಾಬು, ಪ್ರೊ. ಆರ್. ಕೆ. ಭಟ್, ಪ್ರೊ. ಮೋಲಿ ಸಲ್ದಾನ್ಹ, ಪ್ರೊ. ಮೋಹನ್ ನಾಯ್ಕ್, ಡೀನ್ ಡಾ| ಅಮರನಾಥ ಶೆಟ್ಟಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ. ಝೀಶಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸ್ವಾತಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಹಾಲ್ ಜಾಗೀರ್ದಾರ್ ಸ್ವಾಗತಿಸಿ, ಉಪನ್ಯಾಸಕಿ ಅಂಜುಂ ಅರಾ ನಿರೂಪಿಸಿದರು ಹಾಗೂ ವಿದ್ಯಾರ್ಥಿನಿ ಆನಿ ಪೋಲಸ್ ವಂದಿಸಿದರು.

Comments are closed.