ಕರಾವಳಿ

ಚಿಕ್ಕಮಗಳೂರು: ಅಂದು ಪ್ರೀತಿಸಿ ಮದುವೆಯಾದ, ಇಂದು ಹೆಂಡತಿಯ ರುಂಡ ಕಡಿದು ಠಾಣೆಗೆ ತಂದ!

Pinterest LinkedIn Tumblr

ಚಿಕ್ಕಮಗಳೂರು: ತಾನು ಪ್ರೀತಿಸಿ ಮದುವೆಯಾದ ಆತ ಇಂದು ಮಾಡಿದ್ದು ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ. ಮುದ್ದು ಮುದ್ದಾಗಿ ಸಾಕಿದ್ದೆ ಆಕೆಯನ್ನು ಅಂತ ಹೇಳೋ ಅವನು ಆಕೆಯ ರುಂಡ ಮಾತ್ರದೊಂದಿಗೆ ಠಾಣೆಗೆ ಬರುತ್ತಾನೆ. ಆತ ಹಾಗೆ ಮಾಡಿದ್ಯಾಕೆ ಅನ್ನೋದರ ಹಿಂದಿದೆ ಅಕ್ರಮ ಸಂಬಂಧದ ಕಹಾನಿ.

ತನ್ನ ಹೆಂಡತಿ ಪರಪುರುಷನ ತೆಕ್ಕೆಯಲ್ಲಿ ಇದ್ದದ್ದನ್ನ ಕಂಡ ವ್ಯಕ್ತಿಯೋರ್ವ ಆಕ್ರೋಶಗೊಂಡು ತನ್ನ ಹೆಂಡತಿಯ ತಲೆಯನ್ನ ಕಡಿದು, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಶಿವನಿ ರೈಲ್ವೆ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಸತೀಶ್ ಎಂಬಾತ ಹೆಂಡತಿ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಬಂದಾತ.

9 ವರ್ಷಗಳ ಹಿಂದೆ ರೂಪ ಎಂಬುವಳನ್ನ ಪ್ರೀತಿಸಿ ಮದುವೆಯಾಗಿದ್ದ ಸತೀಶ್‍ಗೆ ಓರ್ವ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾರೆ. ಪತಿಯಿಂದ ಕೊಲೆಯಾದ ರೂಪಾಗೆ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದ ಕಾರಣ ಇಬ್ಬರ ನಡುವೆ ಸಾಕಷ್ಟು ಗಲಾಟೆ ಕೂಡ ನಡೆದಿತ್ತು. ಈ ತಕರಾರು ಠಾನೆ ಮೆಟ್ಟಿಲೇರಿದ್ದು ಒಂದು ಹಂತದಲ್ಲಿ ಊರಿನವರ ಸಮ್ಮುಖ ರಾಜಿ ಕೂಡ ನಡೆದಿತ್ತು. ಆದರೆ ಹೆಂಡತಿ ಮತ್ತು ಆಕೆಯ ಪ್ರಿಯಕರನ ಅಕ್ರಮದಾಟ ಮತ್ತೆ ಮುಂದುವರಿದು ಇವರಿಬ್ಬರು ಒಟ್ಟಿಗೆ ಇದ್ದದ್ದನ್ನ ಕಂಡ ಸತೀಶ್, ರೂಪಾ ಜೊತೆಗಿದ್ದ ವ್ಯಕ್ತಿಯ ಮೇಲೆ ಮಚ್ಚು ಬೀಸಿದ್ದಾನೆ. ಆತ ತಪ್ಪಿಸಿಕೊಂಡಿದ್ರಿಂದ ಹೆಂಡತಿಯ ತಲೆ ಕತ್ತರಿಸಿದೆ. ಆ ತಲೆಯನ್ನು ಬೀಸಿದ ಮಚ್ಚಿನೊಂದಿಗೆ ತಂದ ಸತೀಶ್ ಅಜ್ಜಂಪುರ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ.

Comments are closed.