ಮಂಗಳೂರು / ಗುಂಡ್ಯ : ಪಶ್ಚಿ ಘಟ್ಟದ ತಪ್ಪುಲು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕಸಿದು ಬಸ್ಸ್ ಮೇಲೆ ಬಿದ್ದಿದೆ. ಈ ವೇಳೆ ಎರಡು ಬಸ್ಸ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಸಂಭವನೀಯ ಭಾರೀ ಅನಾಹುತವೊಂದು ಚಾಲಕರ ಸಮಯಪ್ರಜ್ಞೆಯಿಂದ ತಪ್ಪಿ ಹೋಗಿದೆ.
ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ತಪ್ಪಲಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿಹರಿಯುತ್ತಿದ್ದು, ಹೆಚ್ಚಿನ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ತೀವ್ರ ಮಳೆಯ ಕಾರಣ ಇಂದು ಬೆಳಗ್ಗೆ ಶಿರಾಡಿ ಘಾಟ್‌ನ ಮಾರನಹಳ್ಳಿ ಬಳಿ ಗುಡ್ಡವೊಂದು ಕಸಿದು ಸರ್ಕಾರಿ ಬಸ್‌ನ ಮೇಲೆ ಬಿದ್ದಿದೆ. ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಮರ ಗಿಡಗಳ ಸಮೇತ ಗುಡ್ಡ ಕುಸಿದು ಬಿದ್ದಿದೆ. ಬಸ್‌ಗೆ ತಾಗಿಕೊಂಡು ಗುಡ್ಡ ಕುಸಿದಿದ್ದು, ಈ ವೇಳೆ ಎದುರುನಿಂದ ಬರುತ್ತಿದ್ದ ಇನ್ನೊಂದು ಬಸ್‌ಗೆ ಸರ್ಕಾರಿ ಬಸ್ಸ್ ಢಿಕ್ಕಿಯಾಗಿದೆ.ಘಟನೆಯಲ್ಲಿ ಯಾವೂದೇ ಪ್ರಯಾಣಿಕರಿಗೆ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಅವಘಡ ಸಂಭವಿಸಿದ ಸಂದರ್ಭ ಬಸ್‌ಗಳು ಸ್ವಲ್ಪ ಮುಂದಕ್ಕೆ ಚಲಿಸಿದರೂ ಪ್ರಪಾತಕ್ಕೆ ಬಿದ್ದು ಭಾರೀ ಅನಾಹುತ ಸಂಭವಿಸುತ್ತಿತ್ತು. ಅದರೆ ಎರಡೂ ಬಸ್ಸ್ ಗಳ ಚಾಲಕರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿಹೋಗಿದೆ.
ಮುನ್ನೂರಕ್ಕೂ ಹೆಚ್ಚು ವಾಹನಗಳ ಪರದಾಟ:
ನಿನ್ನೆಯಿಂದ ಈ ಸ್ಥಳದಲ್ಲಿ ಗುಡ್ಡ ಕಸಿದು ರಸ್ತೆಗೆ ಬಿಳುತ್ತಿದ್ದು,ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಈ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದ್ದು, ಬಸ್ಸ್ ಲಾರಿ, ಕಾರು ಸೇರಿದಂತೆ ಮುನ್ನೂರಕ್ಕೂ ಅಧಿಕ ವಾಹನಗಳು ಸರತಿ ಸಾಲಿನಲ್ಲಿ ನಿಂತು ನಿಂತು ಸಾಗುತ್ತಿದೆ.


Comments are closed.