ಕರಾವಳಿ

ಮಂಗಳೂರು-ದುಬೈ ಸ್ಪೈಸ್ ಜೆಟ್ ವಿಮಾನಯಾನ ಧಿಡೀರ್ ರದ್ದು : ಸಂಕಷ್ಟಕೀಡಾದ 188 ಪ್ರಯಾಣಿಕರು

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು, ಆಗಸ್ಟ್.01: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ದುಬೈಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನಯಾನವನ್ನು ಅನಿವಾರ್ಯ ಕಾರಣದಿಂದ ರದ್ದುಗೊಳಿಸಲಾಗಿದ್ದು, ಇದರಿಂದ 188 ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಮಂಗಳೂರು- ದುಬೈ ನಡುವೆ ಸ್ಪೈಸ್‌ಜೆಟ್ ವಿಮಾನವು ನಿನ್ನೆ ತಡರಾತ್ರಿ 12:45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾನ ಆರಂಭಿಸಬೇಕಿತ್ತು. ಆದರೆ ವಿಮಾನ ಹೊರಡುವ ಸ್ವಲ್ಪ ಹೊತ್ತಿನ ಮೊದಲು ಪೈಲಟ್​ಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಮಂಗಳೂರಿನಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್ ಎಸ್​​ಜಿ 59 ವಿಮಾನ ಯಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದು, ಈ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 188 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಉಳಿದು ಅತಂತ್ರರಾದರು. ಸದ್ಯ ಸ್ಪೈಸ್ ಜೆಟ್ ಸಂಸ್ಥೆ ಪ್ರಯಾಣಿಕರನ್ನು ಹೋಟೆಲ್​ನಲ್ಲಿ ತಂಗಲು ವ್ಯವಸ್ಥೆ ಮಾಡಿದೆ.

ಇನ್ನು ಹೊಸ ಪೈಲಟ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅವರು ಬಂದ ನಂತರ ಸಂಜೆ 5 ಗಂಟೆಗೆ ಮಂಗಳೂರು-ದುಬೈ ಸ್ಪೈಸ್ ಜೆಟ್ ವಿಮಾನವು ಪ್ರಯಾಣ ಬೆಳೆಸಲಿದೆ ಎಂದು ಸ್ಪೈಸ್ ಜೆಟ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.