ಕರಾವಳಿ

ಕುಂದಾಪುರ(ಕೊರ್ಗಿ): ಜಾನುವಾರುಗಳು ಅಸ್ವಸ್ಥ ಪ್ರಕರಣ; ಇನ್ನೊಂದು ಜಾನುವಾರು ಸಾವು

Pinterest LinkedIn Tumblr

ಕುಂದಾಪುರ: ಮೇಯಲು ಬಿಟ್ಟಜಾನುವಾರುಗಳೆರಡು ತೀವ್ರ ಅಸ್ವಸ್ಥಗೊಂಡು ಒಂದು ಜಾನುವಾರು ಮ್ರತಪಟ್ಟು ಇನ್ನೊಂದು ತೀವ್ರ ಅಸ್ವಸ್ಥಗೊಂಡಿದ್ದ ಘಟನೆ ಕುಂದಾಪುರ ತಅಲೂಕಿನ ಕೊರ್ಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುವಾರ ನಡೆದಿದ್ದು ಅಸ್ವಸ್ಥಗೊಂಡಿದ್ದ ಇನ್ನೊಂದು ಹಸು ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

ಕೊರ್ಗಿ ನಿವಾಸಿ ರಾಘವ ಜೋಗಿ ಎಂಬವರಿಗೆ ಸೇರಿದ ಜಾನುವಾರುಗಳನ್ನು ಗುರುವಾರ ಬೆಳಿಗ್ಗೆ ಮೇಯಲು ಬಿಟ್ಟಿದ್ದು ಅರ್ಧ ಗಂಟೆಯೊಳಗೆ ಎರಡು ಹಸುಗಳು ಅಸ್ವಸ್ಥಗೊಂಡಿತ್ತು. ಕೂಡಲೇ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದ್ದರೂ ಕೂಡ ಅಂದು ಮಧ್ಯಾಹ್ನದ ವೇಳೆ ಒಂದು ಜಾನುವಾರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಇನ್ನೊಂದು ಹಸುವಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತಾದರೂ ಕೂಡ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಗರ್ಭಿಣಿ ಹಸು ಸಾವನ್ನಪ್ಪಿದೆ. ಗರ್ಭಿಣಿ ಹಸುವಿನ ಮರಣೋತ್ತರ ಪರೀಕ್ಷೆ ಮಾಡುವ ವೇಳೆ ಹೊಟ್ಟೆಯೊಳಗೆ ಕರುವಿನ ಭ್ರೂಣವಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದ ಭ್ರೂಣ ಕಂಡ ಮನೆಯವರು, ಸ್ಥಳೀಯರು ಮರುಗಿದರು.

ಬುಧವಾರದಂದು ಸಂಜೆ ರಾಘವ ಜೋಗಿ ಮನೆ ಸಮೀಪದ ಮನೆಯವಾರದ ರಾಜು ಹಾಗೂ ರೇಖಾ ದಂಪತಿಗಳು ದನ ತೋಟಕ್ಕೆ ಬರುವ ವಿಚಾರದಲ್ಲಿ ಈ ಮನೆಯವರಲ್ಲಿ ಗಲಾಟೆ ಮಾಡಿದ್ದು ಅವರೇ ಹಲಸಿನ ಹಣ್ಣಿನಲ್ಲಿ ವಿಷ ಹಾಕಿದ್ದಾರೆಂದು ರಾಘವ ಜೋಗಿ ಆರೋಪ ಮಾಡಿದ್ದರು. ಗುರುವಾರ ವೈದ್ಯರು ಸಾವನ್ನಪ್ಪಿದ ಕರುವನ್ನು ಮರಣೋತ್ತರ ಪರೀಕ್ಷೆ ಮಾಡುವ ವೇಳೆ ಹೊಟ್ಟೆಯಲ್ಲಿ ಹಲಸಿನ‌ಹಣ್ಣು ಪತೆಯಾಗಿತ್ತು.

ಈ ಬಗ್ಗೆ ಅದೇ ದಿನ ರಾಘವ ಅವರು ಕುಂದಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಕಲಂ 429 ಅಡಿಯಲ್ಲಿ ಪೊಲೀಸರು ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.