ರಾಷ್ಟ್ರೀಯ

ಕಾಂಗ್ರೆಸ್ ಪಕ್ಷ ಮುಸ್ಲಿಂ ಪುರುಷರಿಗಷ್ಟೆಯೋ ಅಥವಾ ಮುಸ್ಲಿಂ ಮಹಿಳೆಯರಿಗೂ ಇದೆಯೋ: ರಾಹುಲ್ ಗೆ ಪ್ರಧಾನಿ ಮೋದಿ ಪ್ರಶ್ನೆ

Pinterest LinkedIn Tumblr

ಆಜಮ್ ಘರ್: ಕಾಂಗ್ರೆಸ್ ಪಕ್ಷ ಮುಸ್ಲಿಮರ ಪಕ್ಷವೇ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಪುರುಷರಿಗಷ್ಟೇ ಇರುವ ಪಕ್ಷವೋ ಅಥವಾ ಮುಸ್ಲಿಂ ಮಹಿಳೆಯರಿಗೂ ಇದೆಯೋ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಆಜಂ ಘರ್ ನಲ್ಲಿ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಗೆ ಶಿಲನ್ಯಾಸ ನೆರವೇರಿಸಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಿಂದೆ ಪರಸ್ಪರ ನೋಡಿಕೊಳ್ಳುವುದಕ್ಕೂ ಇಷ್ಟ ಪಡದ ವ್ಯಕ್ತಿಗಳು ಒಟ್ಟಿಗೆ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಇವರೆಲ್ಲರೂ ಜಾಮೀನು ಪಡೆದು ಹೊರಗಿದ್ದಾರೆ. ನಿಮ್ಮ ಅಭಿವೃದ್ಧಿ ಪಥದಲ್ಲಿ ವಂಶಾಡಳಿತದ ಪಕ್ಷಗಳು ಅಡ್ಡಿ ಉಂಟುಮಾಡಲು ಯತ್ನಿಸುತ್ತಿವೆ ಎಂದು ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷಗಳ ನಿಲುವನ್ನು ಬಹಿರಂಗಪಡಿಸಲು ತ್ರಿವಳಿ ತಲಾಖ್ ವಿಚಾರವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರ ಜೀವನ ಸರಳ ಹಾಗೂ ಉತ್ತಮವಾಗಿರುವಂತೆ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಮತ್ತೊಂದೆಡೆ ವಿಪಕ್ಷಗಳು ಮಹಿಳೆಯರ ಅದರಲ್ಲಿಯೂ ಮುಸ್ಲಿಂ ಮಹಿಳೆಯರ ಜೀವನವನ್ನು ದುಸ್ತರವನ್ನಾಗಿ ಮಾಡಲು ಯತ್ನಿಸುತ್ತಿದ್ದು, ತ್ರಿವಳಿ ತಲಾಖ್ ನಿಷೇಧವನ್ನು ವಿರೋಧಿಸುತ್ತಿವೆ ಎಂದು ಮೋದಿ ಆರೋಪಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಮುಸ್ಲಿಮರ ಪಕ್ಷ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೆ. ಇದರಿಂದ ನನಗೆ ಅಚ್ಚರಿಯೇನು ಆಗಿಲ್ಲ. ಸಂಸತ್ ನಲ್ಲಿ ಕಾಂಗ್ರೆಸ್ ಪಕ್ಷ ಮಸೂದೆಗಳ ಅಂಗೀಕಾರಕ್ಕೆ ಅಡ್ಡಿಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಪುರುಷರಿಗಷ್ಟೆಯೋ ಅಥವಾ ಮುಸ್ಲಿಂ ಮಹಿಳೆಯರಿಗೂ ಇದೆಯೋ ಎಂದು ಕೇಳುತ್ತೇನೆ” ಎಂದು ಮೋದಿ ಪ್ರಶ್ನಿಸಿದ್ದಾರೆ.

Comments are closed.