ಕರಾವಳಿ

ವಿಷವುಂಡು ಅಸ್ವಸ್ತಗೊಂಡ ಒಂದು ಹಸು ಸಾವು; ಇನ್ನೊಂದು ತೀವ್ರ ಅಸ್ವಸ್ಥ: ಪೊಲೀಸರಿಂದ ತನಿಖೆ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಸ್ವಸ್ಥಗೊಂಡ ಎರಡು ಜಾನುವಾರಗಳು ಪೈಕಿ ಒಂದು ಹಸು ಮೃತಪಟ್ಟಿದ್ದು ಇನ್ನೊಂದು ಹಸು ತೀವೃ ಅಸ್ವಸ್ಥಗೊಂಡಿದ್ದು, ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.

ಕೊರ್ಗಿ ನಿವಾಸಿ ಗುಲಾಬಿ ಬಳೆಗಾರ್ತಿ ಎಂಬವರಿಗೆ ಸೇರಿದ ಒಂದು ಕರು ಮೃತಪಟ್ಟಿದ್ದು ಇನ್ನೊಂದು ಗಬ್ಬದ ದನ ಅಸ್ವಸ್ಥಗೊಂಡಿದೆ.

ದನ ತೋಟಕ್ಕೆ ಬಂದ್ರೆ ಹುಷಾರ್.!?
ದನ ತೋಟಕ್ಕೆ ಹೋಗುವ ವಿಚಾರದಲ್ಲಿ ನಿನ್ನೆ ಸಂಜೆ ಗುಲಾಬಿ ಬಳೆಗಾರ್ತಿ ಹಾಗೂ ಪಕ್ಕದ ಮನೆ ರಾಜು ಹಾಗೂ ಆಕೆಯ ರೇಖಾ ದಂಪತಿಯ ನಡುವೆ ಗಲಾಟೆ ನಡೆದಿತ್ತು. ಈ ವೇಳೆಯಲ್ಲಿ ನಾಳೆ ದನಗಳು ನಮ್ಮ ತೋಟಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದೂ ದಂಪತಿ ಬೆದರಿಕೆ ಹಾಕಿದ್ದು ಇದೇ ಕಾರಣಕ್ಕೆ ದನಗಳಿಗೆ ವಿಷ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯೂ ಕೂಡ ಒಂದು ದನ ಇದೇ ರೀತಿಯಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಅದಕ್ಕೂ ಇವರೇ ಕಾರಣ ಎಂದು ಆರೋಪಿಸಿದ್ದಾರೆ.

ಮಹಿಳೆಯ ರೋಧನೆ..
ಸಾಕಿ ಬೆಳೆಸಿದ ಗೋವುಗಳು ಕಣ್ಣೇದುರೆ ಸಾವುಬದುಕಿನ ನಡುವೆ ವಿಲವಿಲ ಒದ್ದಾಡುತ್ತಿದ್ದು ಮನೆಮಂದಿ ದುಖಿಃತರಾಗಿದ್ದಾರೆ. ಮಳೆಯನ್ನೂ ಲೆಕ್ಕಿಸದೇ ಚಿಕಿತ್ಸೆ ನಡೆಸುತ್ತಾ ದನದ ಮೈ ಸವರುತ್ತಾ ಬದುಕಿಸಲು ಹೆಣಗಾಡುತ್ತಿದ್ಧಾರೆ. ಆ ಮನೆಯಲ್ಲಿನ ಮಹಿಳೆಯಂತೂ ಬಿಕ್ಕಿಬಿಕ್ಕಿ ಅಳುವ ದೃಶ್ಯ ಕರುಳು ಕಿವುಚುವಂತಿತ್ತು.

ಸದ್ಯ ಮೃತ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂಶಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹಲಸಿನ ಹಣ್ಣಿನ ಭಾಗ ಹೊಟ್ಟೆಯಲ್ಲಿ ಪತ್ತೆಯಾಗಿದೆ.

ಕುಂದಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ

Comments are closed.