ಕರಾವಳಿ

ಕಾಯಿಯನ್ನು ಹಾಳಾಗದಂತೆ ಹಲವು ದಿನ ತಾಜಾವಾಗಿ ಇಡಲು ಈ ಟಿಪ್ಸ್

Pinterest LinkedIn Tumblr

ತೆಂಗಿನಕಾಯಿ ರೇಟ್ ಕೇಳಿದ್ರೆ ತಲೆ ತಿರುಗುತ್ತೆ.. ಅಷ್ಟು ಹಣ ಕೊಟ್ಟು ತಂದ ಕಾಯಿ ಸಂಪೂರ್ಣ ಉಪಯೋಗವಾದರೆ ನೆಮ್ಮದಿ… ಅದು ಹಾಳಾದರೆ ಖಂಡಿತ ಹೊಟ್ಟೆ ಉರಿಯುತ್ತದೆ ಅಲ್ಲವೇ?

ಹಾಗಾದರೆ ಅದನ್ನು ಹಾಳಾಗದಂತೆ ತುಂಬಾ ದಿನ ತಾಜಾ ಆಗಿಡಲು ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸಿ;

ತೆಂಗಿನಕಾಯಿಯ ಹೋಳುಗಳನ್ನು ಪಾಲಿಥಿನ್ ಕವರ್ ನಲ್ಲಿ ಹಾಕಿ ಫ್ರೀಜರ್ ನಲ್ಲಿಟ್ಟರೆ ಅದು ತುಂಬಾ ದಿನ ಬಾಳಿಕೆ ಬರುತ್ತದೆ. ಉಪಯೋಗಿಸುವ ಮೊದಲು 2 – 3 ಗಂಟೆ ಮೊದಲು ಹೊರತೆಗೆದು ತೊಳೆದು ತುರಿಯಿರಿ.ತೆಂಗಿನಕಾಯಿ ಜಾಸ್ತಿ ಇದ್ದರೆ, ಅದನ್ನು ಫ್ರಿಜ್ ನಲ್ಲಿ ತರಕಾರಿ ಇಡುವ ಬಾಕ್ಸ್ ನಲ್ಲಿ ಇಡಿ… ಆಗ ಅದರ ನೀರು ಇಂಗಿ ಹೋಗದೆ ಬಹಳಷ್ಟು ದಿನ ಫ್ರೆಶ್ ಆಗಿ ಉಳಿಯುತ್ತದೆ.

ಪೂಜೆ – ಸಮಾರಂಭಗಳಲ್ಲಿ ಒಡೆದ ತೆಂಗಿನಕಾಯಿಯ ಹೋಳುಗಳನ್ನು ಚೆನ್ನಾಗಿ ತೊಳೆದು ಹಾಲಿನ ಕವರ್ ಗಳಲ್ಲಿ ಅಥವಾ ಇತರ ಸಣ್ಣ ಸಣ್ಣ ಕವರ್ ಗಳಲ್ಲಿ ಹಾಕಿ ಫ್ರೀಜರ್ ನಲ್ಲಿಡಿ.ನೀವು ಊರಿನಿಂದ ತುಂಬಾ ತೆಂಗಿನಕಾಯಿಗಳನ್ನು ತಗೊಂಡು ಬಂದರೆ ಗಾಳಿಯಾಡುವ ಜಾಗದಲ್ಲಿ ಅದರ ಜುಟ್ಟು ಮೇಲೆ ಮಾಡಿ ಇಟ್ಟರೆ ಅದು ಕೆಡುವ ಸಾಧ್ಯತೆಗಳು ಕಡಿಮೆ.

ಇನ್ನು ಕೆಲವು ತೆಂಗಿನಕಾಯಿಗಳ ನೀರು ಆರಿ ಕೊಬ್ಬರಿಯಾಗಿರುತ್ತದೆ. ಅವುಗಳನ್ನು ತುರಿದು ಹುರಿದು ತಣ್ಣಗಾದ ಮೇಲೆ ಬಾಟಲಿಯಲ್ಲಿ ಹಾಕಿ ಸಂಗ್ರಹಿಸಿಟ್ಟರೆ, ನಿಮಗೆ ಬೇಕಾದಾಗೆಲ್ಲಾ ವಾಂಗೀಬಾತ್, ಪುಳಿಯೋಗರೆ ಅಥವಾ ಇತರ ತಿಂಡಿಗಳಿಗೆ ಉಪಯೋಗಿಸಬಹುದು.

Comments are closed.