ಕರಾವಳಿ

ಒಂದೇ ದಿನದಲ್ಲಿ ಏಳು ಜಾನುವಾರುಗಳ ನಿಗೂಢ ಸಾವು; ವಿಷ ಹಾಕಿ ಕೊಂದ ಶಂಕೆ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಯಳಜಿತ್ ಗ್ರಾಮಪಂಚಾಯತ್ ವ್ಯಾಪ್ತಿಯ ಕಳಿಹೊಳೆಯ ಹಳ್ಳಿಹೊಸೂರಿನ ಕಾಡಿನಲ್ಲಿ ಏಳು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಾನುವಾರುಗಳಿಗೆ ವಿಷ ಹಾಕಿ ಸಾಯಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಜುಲೈ 7ನೇ ತಾರೀಕಿನಂದು ಈ ಘಟನೆ ನಡೆದಿದ್ದು, ಕೂಡಲೇ ಇಲ್ಲಿನ ನಿವಾಸಿಗಳು ಬೈಂದೂರು ಪಶು ವೈದ್ಯಾಧಿಕಾರಿಯವರನ್ನು ಸಂಪರ್ಕಿಸಿ ಅವರನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದರು. ಕೇವಲ ಒಂದು ಕರುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಅದರ ಕೆಲವು ಭಾಗಗಳನ್ನು ಒಯ್ದಿದ್ದರು. ಆದರೆ ಇದುವರೆಗೂ ವರದಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಬೈಂದೂರು ತೆಗ್ಗರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಾಲಂಬೇರು ನಿವಾಸಿಗಳಾದ ದಲಿತ ಸಮುದಾಯದ ಸೋಮಶೇಖರ ಎಂಬವರ ಮನೆಯ ಎರಡು ಗಬ್ಬದ ದನ ಹಾಗೂ ಒಂದು ಕರು ಸಾವನ್ನಪ್ಪಿದರೆ, ವಸಂತ ಗಾಣಿಗರ ಒಂದು ಕರು, ಶ್ರೀನಿವಾಸ ಗಾಣಿಗ ಎಂಬವರ ಮನೆಯ ಒಂದು ದನ ಮತ್ತು ಬೇರೆ ಗ್ರಾಮದ ಎರಡು ದನಗಳು ಸಾವನ್ನಪ್ಪಿವೆ.

ಕಾಡಿನಲ್ಲಿ ಕೊಳೆಯುತ್ತಿದೆ 2 ದನಗಳ ಕಳೇಬರ
ಎರಡು ದನಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಾಡಿನಲ್ಲೇ ಪತ್ತೆಯಾಗಿದ್ದು, ದುರ್ವಾಸನೆ ಊರಿಡೀ ವ್ಯಾಪಿಸಿದೆ. ಪಶು ವೈದ್ಯಾಧಿಕಾರಿಯವರ ಬೇಜವಾಬ್ದಾರಿತನಕ್ಕೆ ಜಾನುವಾರು ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಕೃಷಿ ಮತ್ತು ಹೈನುಗಾರಿಕೆಯೇ ಜೀವನಾಧಾರ. ದಿನಾಲು ನಮ್ಮ ದನಗಳನ್ನು ಮೇಯಲು ಬಿಡುತ್ತಿದ್ದೆವು. ಆದರೆ ಕೆಲವರ ಕೆಲವರ ಗದ್ದೆಗಳಿಗೆ ಹೋಗುತ್ತದೆ ಎಂಬ ಕಾರಣಕ್ಕೆ ಹಲಸಿನ ಹಣ್ಣಿನಲ್ಲಿ ವಿಷ ಬೆರಸಿ ದನಗಳಿಗೆ ಕೊಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ನಮಗೆ ಸೂಕ್ತ ಪರಿಹಾರ ಒದಗಿಸಿ. ಜಾನುವಾರುಗಳು ಸಾವನ್ನಪ್ಪಿ ಮೂರು ದಿನ ಕಳೆದರೂ ಕೂಡ ಇದುವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ಯಾವೊಬ್ಬ ಅಧಿಕಾರಿಯೂ ನಮ್ಮನ್ನು ಭೇಟಿಯಾಗಿಲ್ಲ. ಮಾಧ್ಯಮಗಳ ಮೂಲಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ, ಸಂತ್ರಸ್ತರ ನೆರವಿಗೆ ಬರಬೇಕಿದೆ.

ದಲಿತ ರೈತಾಪಿ ಜನರ ಕಡಗಣನೆ ಖಂಡನೀಯ
ಯಳಜಿತ್ ಗ್ರಾ.ಪಂ ವ್ಯಾಪ್ತಿಯಲ್ಲಿ ದಲಿತ ಕುಟುಂಬ ಸೇರಿಂದತೆ ರೈತಾಪಿ ಜನರ  7 ಜಾನುವಾರುಗಳಿಗೆ ವಿಷಪ್ರಾಶನವಾಗಿ ಸಾವನ್ನಪ್ಪಿದರೂ ಪೊಲೀಸ್ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ವಿಚಾರ ತಿಳಿದಿದ್ದರೂ ಸ್ಥಳಕ್ಕೆ ಆಗಮಿಸಿಯೂ ನಿರ್ಲಕ್ಷ್ಯ ಮಾಡಿ ಬೇಜವ್ದಾರಿತನ ಮೆರೆದ ಈ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಿಷಪ್ರಾಶನಗೊಂಡು ಸಾವಿಗೀಡಾದ ಜಾನುವಾರುಗಳ ಹೊಂದಿದ ರೈತರ  ಸೂಕ್ತ ಪರಿಹಾರ ನೀಡಬೇಕು. ಜಾನುವಾರು ಸಾವಿನ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆಯಾಗಬೇಕು.-(ಉದಯ್ ಕುಮಾರ್ ತಲ್ಲೂರು, ರಾಜ್ಯಾಧ್ಯಕ್ಷರು ದ.ಸಂ.ಸ ಭೀಮಘರ್ಜನೆ)

Comments are closed.