ಪ್ರಮುಖ ವರದಿಗಳು

ಡಾ. ರಾಜ್​ ಮೊಮ್ಮಗ ಯುವ ರಾಜ್​ಕುಮಾರ್ ನಿಶ್ಚಿತಾರ್ಥ; ಹುಡುಗಿ ಯಾರು ಗೊತ್ತಾ?

Pinterest LinkedIn Tumblr

ಮೈಸೂರು: ವರನಟ ಡಾ.ರಾಜ್​ಕುಮಾರ್ ಮೊಮ್ಮಗ ಯುವ ರಾಜ್​ ಕುಮಾರ್​ ತನ್ನ ಏಳು ವರ್ಷದ ಗೆಳತಿ ಶ್ರೀದೇವಿ ಭೈರಪ್ಪ ಅವರೊಂದಿಗೆ ಗುರುವಾರ ಬೆಳಗ್ಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರ ವಿವಾಹ ನಿಶ್ಚಿತಾರ್ಥ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದಿದೆ.

ಮೈಸೂರು ಮೂಲದ ಶ್ರೀದೇವಿ ಎಂಬುವವರ ಜೊತೆಗೆ ರಾಜ್ ಕುಮಾರ್ ಅವರ ಮೊಮ್ಮಗ ಯುವ ರಾಜ್ ಕುಮಾರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ಸಮಾರಂಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಯುವ ರಾಜ್ ಕುಮಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶ್ರೀದೇವಿಯವರು ಈ ಹಿಂದೆ ಯುವ ರಾಜ್ ಕುಮಾರ್ ಅವರ ಅಣ್ಣ ವಿನಯ್ ರಾಜ್ ಕುಮಾರ್ ಅವರ ‘ರನ್ ಆಂಟನಿ’ ಸಿನಿಮಾದ ಪ್ರಚಾರ ಸಂಬಂಧ ಜವಾಬ್ದಾರಿ ನೋಡಿಕೊಂಡಿದ್ದರು. ರಾಜ್ ಕುಮಾರ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್ ನಲ್ಲಿಯೂ ಕಾರ್ಯನಿರ್ವಹಿಸಿದ್ದರು ಎಂದು ಹೇಳಲಾಗುತ್ತಿದೆ.

ಇದಲ್ಲದೆ, ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರು 7 ವರ್ಷಗಳಿಂದ ಸ್ನೇಹಿತರಾಗಿದ್ದು, ಈ ಸ್ನೇಹ ಪ್ರೀತಿಗೆ ತಿರುಗು ಇದೀಗ ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

Comments are closed.