ಪ್ರಮುಖ ವರದಿಗಳು

ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತೇ…?

Pinterest LinkedIn Tumblr

ನವದೆಹಲಿ: ಖ್ಯಾತ ಅಂತಾರಾಷ್ಟ್ರೀಯ ಬ್ಯಾಂಕ್ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿರುವ ವಿವಿಧ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತ 73ನೇ ಸ್ಥಾನದಲ್ಲಿದೆ.

ಸ್ವಿಟ್ಜರ್ಲೆಂಡ್ ಸರ್ಕಾರ ತನ್ನ ವಾರ್ಷಿಕ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಬ್ಯಾಂಕ್ ನ ವಿದೇಶಿಗರ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಪಟ್ಟಿಯಲ್ಲಿ ಭಾರತ 73ನೇ ಸ್ಥಾನಕ್ಕೆ ಕುಸಿದಿದೆ. ಭಾರತದಿಂದ ಸ್ವಿಸ್ ಬ್ಯಾಂಕ್ ಗೆ 1.01 ಬಿಲಿಯನ್ ಡಾಲರ್ (7 ಸಾವಿರ ಕೋಟಿ) ಹಣ ಹೂಡಿಕೆಯಾಗಿದೆ. 2016ರಲ್ಲಿ ದೇಶದಲ್ಲಿ ತಂದ ಆರ್ಥಿಕ ನೀತಿಗಳಿಂದಾಗಿ ಭಾರತದ ಹೂಡಿಕೆಯಲ್ಲಿ ಶೇ.44ರಷ್ಟು ಕುಸಿದು ಭಾರತ 88ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷ ಚೇತರಿಸಿಕೊಂಡಿದ್ದ ಭಾರತ ಇದೀಗ ಮತ್ತೆ ಸ್ವಿಸ್ ಬ್ಯಾಂಕ್ ನಲ್ಲಿ ತನ್ನ ಹೂಡಿಕೆಯನ್ನು ಶೇ.50ರಷ್ಟು (ಸುಮಾರು 7 ಸಾವಿರ ಕೋಟಿ )ಏರಿಕೆ ಮಾಡಿಕೊಂಡಿದ್ದು, 74ನೇ ಸ್ಥಾನಕ್ಕೆೇರಿದೆ.

ಇನ್ನು ಪಟ್ಟಿಯಲ್ಲಿ ಬ್ರಿಟನ್ ದೇಶ ಅತೀ ಹೆಚ್ಚು ಹೂಡಿಕೆಯೊಂದಿಗೆ ಅಗ್ರಸ್ಥಾನಿಯಾಗಿ ಮುಂದುವರೆದಿದ್ದು, ಪಾಕಿಸ್ತಾನ ಭಾರತಕ್ಕಿಂತ ಒಂದು ಸ್ಥಾನ ಮೇಲೆ ಅಂದರೆ 72ನೇ ಸ್ಥಾನದಲ್ಲಿದೆ. ಇನ್ನು ಭಾರತದ ಒಟ್ಟಾರೆ ಗ್ರಾಹಕ ಸಂಖ್ಯೆಯಲ್ಲಿ 0.004ರಷ್ಟು ಏರಿಕೆ ಕಂಡುಬಂದಿದೆ. ಕಳೆದ ಈ ಪ್ರಮಾಣ 0.007ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ಜಾರೆ.

2015ರಲ್ಲಿ ಭಾರತ 75ನೇ ಸ್ಥಾನದಲ್ಲಿತ್ತು. 2016ರಲ್ಲಿ 61ನೇ ಸ್ಥಾನದಲ್ಲಿತ್ತು.
ಪ್ರಸ್ತುತ ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಹೂಡಿಕೆ ಪ್ರಮಾಣದ ಆಧಾರದ ಮೇಲೆ ದೇಶಗಳ ಪಟ್ಟಿಯನ್ನು ತಯಾರಿಸಿದ್ದು, ಆ ಪಟ್ಟಿಯಲ್ಲಿ ಗ್ರಾಹಕರ ವಿವರ ಮತ್ತು ಹೂಡಿಕೆ ಪ್ರಮಾಣವನ್ನು ನಮೂದಿಸಿಲ್ಲ. ಇದು ಸ್ವಿಸ್ ಬ್ಯಾಂಕ್ ನಿಯಮಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ವಿವರ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಗ್ರಾಹಕರು ಬೇರೆ ದೇಶಕ್ಕೆ ಸೇರಿದ್ದು ಮತ್ತೊಂದು ದೇಶದಿಂದ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದಾರೆ. 2017ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿನ ಹೂಡಿಕೆ ಪ್ರಮಾಣದಲ್ಲಿ ಶೇ.3ರಷ್ಚು ಏರಿಕೆ ಕಂಡುಬಂದಿದ್ದು, ಒಟ್ಟಾರೆ ಮೊತ್ತ 1.46 ಟ್ರಿಲಿಯನ್ (100 ಲಕ್ಷ ಕೋಟಿ)ಡಾಲರ್ ಗೆ ಏರಿಕೆಯಾಗಿತ್ತು.

Comments are closed.