ಕರಾವಳಿ

ಯುವ ಸಮುದಾಯವನ್ನು ಮಾದಕ ಚಟಗಳಿಂದ ದೂರವಾಗಿಸಲು ಜಾಗೃತಿ ಮೂಡಿಸಿ : ವಿದ್ಯಾರ್ಥಿಗಳಿಗೆ ವೇದವ್ಯಾಸ ಕಾಮತ್ ಕರೆ

Pinterest LinkedIn Tumblr

ಮಂಗಳೂರು : ಕೆನರಾ ಗಲ್ಸ್ ಹೈಸ್ಕೂಲ್ ಇದರ ವಿದ್ಯಾರ್ಥಿ ಮಂತ್ರಿ ಮಂಡಲ ಉದ್ಘಾಟನಾ ಕಾರ್‍ಯಕ್ರಮ ಮಂಗಳವಾರ ನಡೆಯಿತು. ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವವನ್ನು ನಾಯಕತ್ವವನ್ನು ಮೈಗೂಡಿಸಿಕೊಂಡು, ಮುಂದೆ ರಾಷ್ಟ್ರಮಟ್ಟದ ನಾಯಕತ್ವ ವಹಿಸಿಕೊಳ್ಳುವ ಅರ್ಹತೆಯನ್ನು ಸೃಷ್ಟಿಸಲು ಈ ವಿಧಾನ ಅತ್ಯಂತ ಪರಿಣಾಮಕಾರಿಯಾಗಿದೆ. ಭಾರತದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಯುವ ಜನತೆ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಪಡೆಯುವ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಅತ್ಯಂತ ಪ್ರಭಾವಿ ನಾಯಕನಾಗಿ ಬೆಳೆಯಬೇಕು ಎಂಬ ವಿಶಾಲ ದೃಷ್ಟಿಕೋನದಿಂದ ವಿದ್ಯಾರ್ಥಿ ಮಂತ್ರಿ ಮಂಡಲ ರಚಿಸಬೇಕು. ಇಲ್ಲಿ ಆಡಳಿತ ಮತ್ತು ವಿಪಕ್ಷ ಎರಡೂ ಇದೆ. ಆಡಳಿತ ಪಕ್ಷದ ಮುಖಂಡರಿಗೆ ಎಷ್ಟು ಜವಾಬ್ದಾರಿಗಳಿರುತ್ತವೆಯೋ ಅಷ್ಟೇ ಜವಾಬ್ದಾರಿಗಳು ವಿರೋಧ ಪಕ್ಷಕ್ಕೂ ಇದೆ ಎಂದು ಶಾಸಕರು ಹೇಳಿದರು.

ಇಂದು ಮಾದಕ ವಸ್ತು ವಿರೋಧಿ ದಿನವಾಗಿದ್ದು ಮಾದಕವಸ್ತುಗಳು ಅತ್ಯಂತ ಹೆಚ್ಚಾಗಿ ಶಾಲಾ, ಕಾಲೇಜು ವಠಾರದಲ್ಲಿಯೇ ಬಳಕೆಯಾಗುತ್ತಿರುವುದು ಆಘಾತದ ವಿಚಾರವಾಗಿದೆ. ಈ ದೇಶದ ಮೂಲ ಶಕ್ತಿಯಾಗಿರುವ ಯುವ ಸಮುದಾಯ ಮಾದಕ ಚಟಗಳಿಂದ ದೂರವಾಗಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳ ಮೇಲಿದೆ ಎಂದು ವೇದವ್ಯಾಸ ಕಾಮತ್ ಕಿವಿಮಾತು ಹೇಳಿದರು.

ಕೆನರಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.

Comments are closed.