ಕರಾವಳಿ

ವಿಕಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಹಾಗೂ ನಿಯಮಬಾಹಿರ ಮಾನವ ಸಾಗಣೆ ನಿರ್ಮೂಲನಾ ದಿನ ಆಚರಣೆ

Pinterest LinkedIn Tumblr

ಮಂಗಳೂರು, ಜೂನ್.26: ಮಂಗಳೂರಿನ ಮೇರಿಹಿಲ್ ಸಮೀಪವಿರುವ ವಿಕಾಸ್ ಕಾಲೇಜಿನಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಹಾಗೂ ನಿಯಮಬಾಹಿರ ಮಾನವ ಸಾಗಣೆ ನಿರ್ಮೂಲನಾ ದಿನವನ್ನು ಆಚರಿಸಲಾಯಿತು.

ಮಂಗಳೂರು ಡಿಸಿಪಿ ಹನುಮಂತರಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ಮುಂದುವರಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾದಕದ್ರವ್ಯದ ಸೇವನೆಯು ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಂಡುಬರುತ್ತಿದೆ. ಒಬ್ಬ ವ್ಯಕ್ತಿ, ಸಮಾಜ, ರಾಷ್ಟ್ರ, ಜಗತ್ತು ನಿಸ್ಸಂಶಯವಾಗಿ ಈ ಸಮಸ್ಯೆಯ ದುಷ್ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ’. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಮಾದಕದ್ರವ್ಯ ಸೇವನೆಯ ನಿರ್ಮೂಲನಾ ಸಂವಹನಾ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದಕದ್ರವ್ಯ ಸೇವನೆಯ ವಿರುದ್ಧ ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿ ಶ್ರೀಯುತ ಜೆ. ಕೊರಗಪ್ಪ, ವಿಕಾಸ್ ಎಜ್ಯುಸೊಲ್ಯುಶನ್‌ನ ನಿರ್ದೇಶಕರಾದ ಡಾ. ಅನಂತ್ ಪ್ರಭು ಜಿ., ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಶ್ರೀಯುತ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲರಾದ ಪ್ರೊ ಟಿ. ರಾಜಾರಾಮ್ ರಾವ್ ಉಪಸ್ಥಿತರಿದ್ದರು.

ಸ೦ಚಾಲಕರಾದ ಡಾ. ಡಿ ಶ್ರೀಪತಿ ರಾವ್ ವಂದನಾರ್ಪಣೆ ಗೈದರು. ಉಪನ್ಯಾಸಕಿ ಶ್ರುತಿ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Comments are closed.