ಕರಾವಳಿ

ನೈರುತ್ಯ ಶಿಕ್ಷಕ ಕ್ಷೇತ್ರದ ಚುನಾವಣೆ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕ್ಯಾ.ಕಾರ್ಣಿಕ್‌ರಿಗೆ ಸೋಲು : ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ವಿಜಯಿ

Pinterest LinkedIn Tumblr

ಜೆಡಿಎಸ್ ಅಭ್ಯರ್ಥಿ ಬೋಜೇಗೌಡ                               ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು, ಜೂನ್. 13: ವಿಧಾನಪರಿಷತ್‍‌ಗೆ ನಡೆದ ನೈರುತ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಸೋಲಾಗಿದೆ.ಇಲ್ಲಿ ಮೊದಲ ಬಾರಿಗೆ ಜೆಡಿಎಸ್ ಖಾತೆ ತೆರೆದಿದೆ.

ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಸತತ ಎರಡು ಅವಧಿಗಳಲ್ಲಿ ಗೆದ್ದು ಈ ಬಾರಿ ಕೂಡ ಗೆದ್ದು ಹ್ಯಾಟ್ರಿಕ್ ಸಾಧಿಸ ಬಹುದೆಂದು ನಿರೀಕ್ಷಿಸಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ಜೆಡಿಎಸ್ ಅಭ್ಯರ್ಥಿ ಎಸ್.ಎಸ್.ಬೋಜೇಗೌಡ ಅವರು ವಿಜಯಿಯಾಗಿದ್ದಾರೆ.

ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ತೀವ್ರ ಪ್ರತಿಸ್ಪರ್ಧೆ ನೀಡಿದ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ಜೆಡಿಎಸ್ ಅಭ್ಯರ್ಥಿ ಎಸ್.ಎಸ್.ಬೋಜೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಗೆ ಈ ಬಾರಿ 12 ಮಂದಿ ಸ್ಪರ್ಧಿಸಿದ್ದು ತಮ್ಮನ್ನು ಹೊರತುಪಡಿಸಿ, ಸ್ಪರ್ಧಿಸಿದ ಎಲ್ಲ 11 ಅಭ್ಯರ್ಥಿಗಳ ನಿರ್ಗಮನದ ನಂತರವೂ ಜೆಡಿಎಸ್‌ನ ಭೋಜೇಗೌಡ ಅವರು ಗೆಲುವಿಗೆ ನಿಗಧಿಯಾಗಿದ್ದ 7,846 ಮತಗಳ ಕೋಟವನ್ನು ತಲುಪಲಾಗದೆ 7,310 ಮತ ಪಡೆದರು.

ಅಂತೆಯೆ ಚುನಾವಣೆ ಆಯೋಗ ಅಂತಿಮವಾಗಿ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಬೋಜೇಗೌಡ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಿತು.

Comments are closed.