ಕರಾವಳಿ

ಉಡುಪಿ: ಬಸ್ಸಿನಲ್ಲಿ ಹೃದಯಾಘಾತ; ಪೊಲೀಸ್ ಸಿಬಂದಿ ಸಾವು

Pinterest LinkedIn Tumblr

ಉಡುಪಿ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬಸ್ಸಿನಲ್ಲಿ ಹೃದಯಾಘಾತವಾಗಿ ಶಸಸ್ತ್ರ ಮೀಸಲು ಪಡೆಯ ಸಿಬ್ಬಂದಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಕುಂದಾಪುರದ ಮಡಮಕ್ಕಿ ನಿವಾಸಿಯಾಗಿರುವ ವಸಂತ ಪೂಜಾರಿ (39) ಮೃತ ಪೊಲೀಸ್ ಸಿಬಂದಿ.

2003ರಲ್ಲಿ ಸಶಸ್ತ್ರ ಪಡೆಗೆ ಸೇರ್ಪಡೆಯಾಗಿದ್ದ ವಸಂತ ಪೂಜಾರಿಯವರು ಸೋಮವಾರ ಉಡುಪಿಯಲ್ಲಿ ಕರ್ತವ್ಯ ಮುಗಿಸಿ ಬಳಿಕ ಮಡಾಮಕ್ಕಿಯ ಮನೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ವಸಂತ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೃತದೇಹವನ್ನು ಅಜ್ಜರಕಾಡು ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು ಸ್ಥಳಕ್ಕೆ ಎಸ್ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.