ಕರಾವಳಿ

ಭಾರೀ ಮಳೆಗೆ ಫಳ್ನೀರ್ ಬಳಿ ಮಣ್ಣು ಕುಸಿತ :ಅಪಾಯದ ಸ್ಥಿತಿ ನಿರ್ಮಾಣ :ಎನ್‌ಡಿಆರ್‌ಎಫ್‌ನಿಂದ ಕಾರ್ಯಚರಣೆ

Pinterest LinkedIn Tumblr

ಮಂಗಳೂರು, ಮೇ 30: ಮಂಗಳವಾರ ಸುರಿದ ಭಾರೀ ಮಳೆಗೆ ನಗರದ ಫಳ್ನೀರ್ ಬಳಿ ನೂತನ ವಸತಿ ಸಮುಚ್ಛಯ ನಿರ್ಮಾಣವಾಗುತಿದ್ದ ಸ್ಥಳದಲ್ಲಿ ಮಣ್ಣು ಜರಿದ ಪರಿಣಾಮ ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ.

ಹೊಸ ಫ್ಲಾಟ್‌ವೊಂದರ ನಿರ್ಮಾಣಕ್ಕಾಗಿ ಮಣ್ಣನ್ನು ಜೆಸಿಬಿ ಮೂಲಕ ತೆಗೆಯಲಾಗಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಮಣ್ಣು ಜರಿಯಲಾರಂಭಿಸಿದೆ. ತಕ್ಷಣ ಸಂಬಂಧಪಟ್ಟವರು ಜರಿದ ಭಾಗಕ್ಕೆ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ. ಆದರೂ ಮನೆಯ ಒಂದು ಬದಿಯ ಕೆಲ ಭಾಗದ ಮಣ್ಣು ಭಾಗಶಃ ಜರಿದಿದ್ದು, ಮನೆಯು ಬಹುತೇಕ ಅಪಾಯದಲ್ಲಿದೆ. ಘಟನೆ ಹಿನ್ನೆಲೆಯಲ್ಲಿ ಮನೆ ಮಂದಿ ತೀವ್ರ ಆತಂಕಿತರಾಗಿದ್ದಾರೆ.

ಈಗಾಗಲೇ ಮಂಗಳೂರಿಗೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ದ ಸಿಬ್ಬಂದಿಗಳು ಈ ಸ್ಥಳದಲ್ಲಿ ತುರ್ತು ಕಾರ್ಯಚರಣೆ ಕೈಗೊಂಡಿದ್ದಾರೆ. ಮಂಗಳೂರಿನಲ್ಲಿ ಇಂದು ಸ್ವಲ್ಪ ಮಳೆ ವಿರಾಮ ನೀಡಿರುವುದರಿಂದ ಕಾರ್ಯಾಚರಣೆ ಸುಗಮವಾಗಿ ಸಾಗಿದೆ.

Comments are closed.