ಕರಾವಳಿ

ರೈ ದುರಾಡಳಿತದಿಂದ ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಗೆಲುವು ಸಾಧ್ಯವಾಗಿದೆ :ರಾಜೇಶ್ ನಾಯಕ್ ಉಳಿಪಾಡಿ ಗುತ್ತು

Pinterest LinkedIn Tumblr

ಮಂಗಳೂರು: ಮಾಜಿ ಸಚಿವ ಬಿ.ರಮಾನಾಥ್ ರೈ ಅವರ ದುರಾಡಳಿತದಿಂದ ನನ್ನ ಗೆಲುವು ಸಾಧ್ಯವಾಗಿದೆ. ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಈ ಗೆಲುವು ಬಂದಿದೆ.ಈ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಸಮರ್ಪಿಸುತ್ತಿದ್ದೇನೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಹೇಳಿದ್ದಾರೆ.

ವಿಜಯ ಘೋಷಣೆಯಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಅಚ್ಚೇದಿನ ಬರಲಿದೆ ಎಂದು ಹೇಳಿದರು. ರಮಾನಾಥ್ ರೈ ಅವರ ದುರಾಡಳಿತ ಹಾಗೂ ಒಂದು ವರ್ಗದ ತುಷ್ಟೀಕರಣದ ಫಲವೇ ಅವರ ಈ ಪರಿಸ್ಥಿತಿಗೆ ಕಾರಣವಾಗಿದೆ. ಇದು ಹಿಂದುತ್ವದ ಗೆಲುವೂ ಆಗಿರಬಹುದು, ದುರಾಡಳಿತದ ವಿರುದ್ಧವೂ ಆಗಿರಬಹುದು, ಒಳ್ಳೆಯ ಕೆಲಸಗಳಿಂದ ಕೂಡ ನನ್ನ ಗೆಲುವು ಸಾಧ್ಯವಾಗಿರ ಬಹುದು ಎಂದು ರಾಜೇಶ್ ನಾಯಕ್ ತಿಳಿಸಿದ್ದಾರೆ.

Comments are closed.