ಕರಾವಳಿ

ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರೈ ಕಾರಿಗೆ ಮುತ್ತಿಗೆ ಹಾಕಿ ಮೋದಿ.. ಮೋದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

Pinterest LinkedIn Tumblr

ಮಂಗಳೂರು, ಮೇ.15 : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರು ಮತ ಏಣಿಕೆ ಕೇಂದ್ರವಾದ ಮಂಗಳೂರಿನ ಬೊಂದೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಶತಾಬ್ಧಿ ಹಿ.ಪ್ರಾ.ಶಾಲೆಯ ಮುಂಭಾಗ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರೈ ಕಾರಿಗೆ ಮುತ್ತಿಗೆ ಹಾಕಿ ಮೋದಿ, ಮೋದಿ ಎಂದು ಘೋಷಣೆ ಕೂಗಿದ ಘಟನೆ ಇಂದು ಮತ ಏಣಿಕೆ ಕೇಂದ್ರದ ಬಳಿ ನಡೆದಿದೆ.

ಈ ಬಾರಿಯ ಚುನಾವಣೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪಾಡಿ ಗುತ್ತು (93815 ಮತ) ಇವರ ಎದುರು ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ (78128 ಮತ) ಅವರು ಹಿನಾಯವಾಗಿ ಸೋತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೈ ಅವರು ಹಲವಾರು ಬಾರಿ ಹಿಂದೂ ಸಂಘಟನೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳ ವಿರೋಧ ಕಟ್ಟಿಕೊಂಡಿದ್ದರು ಎನ್ನಲಾಗಿದೆ.. ಮಾತ್ರವಲ್ಲದೇ ಒಂದು ಸಂದರ್ಭದಲ್ಲಿ ತಾನು ಮುಸ್ಲಿಂ ಸಮುದಾಯದವರ ಮತಗಳಿಂದ ಗೆದ್ದು ಬಂದಿರುವುದಾಗಿ ಅರ್ಥ ಬರುವ ರೀತಿಯಲ್ಲಿ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಹಿಂದೂ ಸಂಘಟನೆಗಳ ಮುಖಂಡರ ಆಕ್ರೋಷಕ್ಕೂ ಗುರಿಯಾಗಿದ್ದರು ಎನ್ನಲಾಗಿದೆ..

ರಮಾನಾಥ ರೈ ಅವರು ಮುಸ್ಲಿಂರ ಓಲೈಕೆಯಲ್ಲಿ ತೊಡಗಿದ್ದು, ಹಿಂದೂಗಳ ಬಗ್ಗೆ ಯಾವೂದೇ ಕಾಳಾಜಿ ತೋರಿಸುತ್ತಿಲ್ಲ ಎಂಬ ಅಪವಾದ ಕೂಡ ಕೇಳಿ ಬಂದಿತ್ತು. ಈ ಎಲ್ಲಾ ಕಾರಣಗಳಿಂದ ಜಿಲ್ಲೆಗೆ ಬಂದ ಬಿಜೆಪಿ ಮುಖಂಡರು ಈ ಬಾರಿ ಬಂಟ್ವಾಳದಲ್ಲಿ ರಾಮ ಹಾಗೂ ರಹೀಮ್ ( ಅಲ್ಲಾ) ನಡುವೆ ಸ್ಫರ್ಧೆ ನಡೆಯಲಿದ್ದು, ಇಲ್ಲಿ ರಾಮನೇ ಗೆಲ್ಲುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಮುಖಂಡರು ಹೇಳಿರುವ ಭವಿಷ್ಯ ನಿಜವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ತೆಸ್ ಅಭ್ಯರ್ಥಿ ರಮಾನಾಥ ರೈ ಅವರು ಬಾರೀ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಮೊದಲೇ ರೈ ಅವರ ಹೇಳಿಕೆಗಳಿಂದ ಕೆಂಡಮಂಡಲವಾಗಿದ್ದ ಬಿಜೆಪಿ ಕಾರ್ಯಕರ್ತರು ಇದೀಗ ರೈ ಅವರ ಸೋಲಿನಿಂದ ಮತ್ತಷ್ಟು ಹರ್ಷಗೊಂಡು ಅವರು ಮತ ಏಣಿಕೆ ಕೇಂದ್ರದ ಬಳಿಯಿಂದ ತೆರಳುತ್ತಿದ್ದ ವೇಳೆ ರೈ ಅವರ ಕಾರಿಗೆ ಮುತ್ತಿಗೆ ಹಾಕಿ ಮೋದಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿದೆ.

ಈ ವೇಳೆ ಸ್ಥಳದಲ್ಲಿ ಹಾಜಾರಿದ್ದ ಕರ್ತವ್ಯ ನಿರತ ಪೊಲೀಸರು ಕಾರ್ಯಕರ್ತರನ್ನು ಸ್ಥಳದಿಂದ ತೆರವುಗೊಳಿಸಿ ರೈ ಅವರನ್ನು ಸ್ಥಳದಿಂದ ತೆರಳಲು ಅವಕಾಶ ಮಾಡಿಕೊಡುವ ಮೂಲಕ ಯಾವೂದೇ ಅಹಿತಕರ ಘಟನೆ ನಡೆಯದಂತೆ ತಡೆದರು. ಮತ ಎಣಿಕೆ ಪ್ರಕ್ರಿಯೆಯು ಸುಸೂತ್ರವಾಗಿ ನಡೆಸುವ ಸಲುವಾಗಿ ಜಿಲ್ಲಾಡಳಿತವು ಮೇ 14ರ ರಾತ್ರಿ 12 ಗಂಟೆಯಿಂದ 16ರ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸೆ. 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಮತ ಎಣಿಕೆಯ ಕೇಂದ್ರದ ಬಳಿ ಜಮಾಯಿಸಿದ ಪಕ್ಷಗಳ ಕಾರ್ಯಕರ್ತನ್ನು ಪೊಲೀಸರು ಚದುರಿಸಿದರು.

ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರ ಸಹಿತ ಎಲ್ಲೂ ಕಾನೂನು ಬಾಹಿರವಾಗಿ ಗುಂಪು ಸೇರುವುದು, ವಿಜಯೋತ್ಸವ ಮಾಡುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಅಲ್ಲಿದ್ದ ಎಲ್ಲರನ್ನೂ ಪೊಲೀಸರು ಜಾಗ ಖಾಲಿ ಮಾಡಿಸಿದರು.

__ ಸತೀಶ್ ಕಾಪಿಕಾಡ್

Comments are closed.