ಕರಾವಳಿ

ಮದುವೆಗೂ ಮುನ್ನ ಮತದಾನದಲ್ಲಿ ಪಾಲ್ಗೊಂಡ ನವವಧು

Pinterest LinkedIn Tumblr

ಮಂಗಳೂರು, ಮೇ.12: ಮನೆಯಲ್ಲಿ ಸುಮ್ಮನೆ ಕುಳಿತರೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವುದೆಂದರೆ ಅದೆಷ್ಟೋ ಮಂದಿಗೆ ಅಲರ್ಜಿ, ಹೀಗಿರುವಾಗ ಮಂಗಳೂರಿನಲ್ಲಿ ನವವಧುವೊಬ್ಬರು ಮದುವೆಯಯ ಉಡುಪು ಧರಿಸಿ ಮತ ಚಲಾಯಿಸುವ ಮೂಲಕ ಮದುವೆಗಿಂತ ಮತದಾನವೇ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಗರದ ವಿಯಾಲೋ ಫೆರ್ನಾಂಡಿಸ್ ಎಂಬವರ ವಿವಾಹ ಬೆಳ್ತಂಗಡಿಯಲ್ಲಿ ನಡೆಯಬೇಕಾಗಿತ್ತು. ಹಾಗಾಗಿ ಆಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಬೆಳಗ್ಗೆಯೇ ಬೋಂದೆಲ್‌ನ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಮತ ಚಲಾಯಿಸಿ ಗಮನ ಸೆಳೆದರು.

ತನ್ನ ಬಾಳಿನ ಪ್ರಮುಖ ಘಟ್ಟ ಮದುವೆಯ ದಿನವೂ ಈಕೆ ಮತದಾನ ಮಾಡಿ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾಳೆ. ನವ ಬಾಳಿನ ಹೊಸ್ತಿಲಲ್ಲಿರುವ ಈ ವಧುವಿಗೆ ಪ್ರಜಾಪ್ರಭುತ್ವದ ಜಾತ್ರೆಯೇ ಮುಖ್ಯ ಎಂದುಕೊಂಡ ಈಕೆ ಇಂದು ಬೆಳಗ್ಗೆಯೇ ಮತಚಲಾಯಿಸಿದ್ದಾರೆ. ಉಂಗುರ ಬದಲಾಯಿಸುವ ಮುನ್ನ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

Comments are closed.