ಕರಾವಳಿ

ಮಂಗಳೂರಿನಲ್ಲಿ ಮಕ್ಕಳ ಜತೆಗೆ ಕ್ರಿಕೆಟ್ ಆಡಿದ ಜಿಂಬಾಬ್ವೆ ಮಾಜಿ ಕ್ಯಾಪ್ಟನ್ ಹೀತ್ ಸ್ಟ್ರೀಕ್

Pinterest LinkedIn Tumblr

ಮಂಗಳೂರು, ಮೇ 05: ಜಿಂಬಾಬ್ವೆ ಕ್ರಿಕೆಟ್ ಮಾಜಿ ಕ್ಯಾಪ್ಟನ್ ಹಾಗೂ ಹಾಲಿ ಕೋಚ್ ಹೀತ್ ಸ್ಟ್ರೀಕ್ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿವಿ ಕಾಲೇಜಿನಲ್ಲಿ ಕರಾವಳಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಈಗಾಗಲೇ ನಡೆಯುತ್ತಿರುವ ಮಕ್ಕಳ ಕ್ರಿಕೆಟ್ ತರಬೇತಿ ಕ್ರೀಡಾಂಗಣಕ್ಕೆ ಆಗಮಿಸಿ ಮಕ್ಕಳ ಜತೆಗೆ ಆಟವಾಡಿದರು.

ಬಳಿಕ ಮಂಗಳೂರು ವಿವಿ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೀತ್ ಸ್ಟ್ರೀಕ್ ಅವರು, ಕರಾವಳಿ ಕ್ರಿಕೆಟ್ ಅಕಾಡಮಿಯ ವತಿಯಿಂದ ಜಿಂಬಾಬ್ವೆ ಹಾಗೂ ಮಂಗಳೂರು ತಂಡಗಳ ನಡುವೆ 15 ಮತ್ತು 16 ವರ್ಷ ವಯೋಮಿತಿಯೊಳಗಿನ ಬಾಲಕರ ಮಂಗಳೂರು ಸೀರಿಸ್ ಕ್ರಿಕೆಟ್ ಟೂರ್ನಿ ಡಿ.11ರಿಂದ15ವರಿಗೆ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಮಂಗಳೂರು ಎಲ್ಲ ಕ್ಷೇತ್ರಗಳಲ್ಲೂ ಮುಂದಿವೆ. ಕ್ರೀಡಾ ಪ್ರತಿಭೆಗಳು ಸಾಕಷ್ಟಿವೆ. ಅದರಲ್ಲೂ ಕ್ರಿಕೆಟ್‌ನಲ್ಲಿ ಆಸಕ್ತಿ ವಹಿಸುವವರ ಸಂಖ್ಯೆ ಸಾಕಷ್ಟಿವೆ. ಇಂತಹ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರಾವಳಿ ಕ್ರಿಕೆಟ್ ಅಕಾಡಮಿ ಕ್ರಿಕೆಟ್ ಹಾಗೂ ಜಿಂಬಾಬ್ವೆ ತಂಡಗಳ ಮಧ್ಯೆ ಟಿ20 ಚುಟುಕು ಕ್ರಿಕೆಟ್ ಪಂದ್ಯ ನಡೆಯಲಿದೆ. ಲೀಗ್ ಹಂತದ ಪಂದ್ಯ ಇದಾಗಿದ್ದು, ಪ್ರತಿದಿನ 3 ಪಂದ್ಯವನ್ನು ನಡೆಸಲಾಗುತ್ತದೆ ಎಂದರು.

ಈ ಸಂದರ್ಭ ಹೀತ್ ಸ್ಟ್ರೀಕ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಕೂಲ್‌ನ ಸಿಇಒ ಜೋಸೆಫ್ ರೇಗೊ, ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.