ಕರಾವಳಿ

ಹಿಂದೂ ವಿರೋಧಿ ಕಾಂಗ್ರೆಸ್ ತಿರಸ್ಕರಿಸಿ – ಹಿಂದೂ ಪರ ಪಕ್ಷಕ್ಕೆ ಮತ ಹಾಕಿ : ವಿಎಚ್‌ಪಿ ಮುಖಂಡ ಗೋಪಾಲ್

Pinterest LinkedIn Tumblr

ಮಂಗಳೂರು ಮೇ 04: ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದು ಕೇವಲ ನಾಟಕ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳು ಆಚರಿಸುವ ಹಬ್ಬಗಳನ್ನು ತಡೆಯುವ ಹಾಗೂ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡಿದ್ದು ಮತಾಂಧ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂಸೆಗೆ ಪ್ರಚೋದನೆ ನೀಡಿದೆ. ಮನೆಗಳ ಹಟ್ಟಿಗಳಿಂದ ಹಾಗೂ ಗೋಶಾಲೆಗಳಿಂದ ಮಾರಕಾಸ್ತ್ರಗಳ ಮೂಲಕ ಬೆದರಿಸಿ ಗೋವುಗಳನ್ನು ಅಪಹರಿಸುವ ದುಷ್ಕರ್ಮಿಗಳಿಗೆ ರಾಜ್ಯ ಸರಕಾರ ರಕ್ಷಣೆ ನೀಡಿದೆ ಎಂದು ಆರೋಪಿಸಿದರು.

ಕಳೆದ 5 ವರ್ಷ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ ಕಾರ್ಯನಿರ್ವಹಿಸಿದೆ. ಹಿಂದೂ ಸಮಾಜಕ್ಕೆ ಅನೇಕ ಅಪಚಾರ ಎಸಗಿದೆ. ಹಿಂದೂ ಮತಗಳಿಗಾಗಿ ಈಗ ನಾಟಕವಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂಗಳ ನೆನಪಾಗುತ್ತಿದೆ. ಪ್ರತಿಯೊಬ್ಬ ಹಿಂದೂ ಕೂಡಾ ಹಿಂದೂ ವಿರೋಧಿಯಾಗಿರುವ ಕಾಂಗ್ರೆಸ್ ಅನ್ನು ತಿರಸ್ಕರಿಸಿ ಹಿಂದೂಗಳ ಪರವಾಗಿರುವ ಪಕ್ಷಕ್ಕೆ ಮತ ಹಾಕಬೇಕು ಎಂದು ಗೋಪಾಲ್ ಅವರು ಮನವಿ ಮಾಡಿದರು..

Comments are closed.