ಕರಾವಳಿ

ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ :ಸಾಧಕರಿಗೆ ಚಿನ್ನದ ಪದಕ, ಪ್ರಶಸ್ತಿ ವಿತರಣೆ – 50 ಮಂದಿ ವಿಶೇಷ ಚೇತನರ ದತ್ತು ಸ್ವೀಕಾರ

Pinterest LinkedIn Tumblr

ಮಂಗಳೂರು, ಎಪ್ರಿಲ್.29: ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ ಹಾಗೂ 2016-17ನೆ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಚಿನ್ನದ ಪದಕ, ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭವು ಶನಿವಾರ ನಗರದ ಹೊರವಲಯದ ಅಡ್ಯಾರ್‌ನ ವಿ.ಕೆ ಶೆಟ್ಟಿ ಸಭಾಭವನ ಅಡ್ಯಾರ್ ಗಾರ್ಡನ್ಸ್‌ನಲ್ಲಿ ನಡೆಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ರೂವಾರಿ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸರ್ವಿಸಸ್‌ನ ಮುಖ್ಯಸ್ಥ ಡಾ. ಸಂಜೀವ ರೈ, ಮಣಿಪಾಲ ವಿವಿಯ ಪಿಎಚ್‌ಡಿ ಪಿಡಿಎಫ್ ಎಂಎಂಎಂಸಿ ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಡಾ.ಕಿರಣ್ಮಯಿ ಎಸ್. ರೈ, ದೇಶ ಸೇವಾ ವಿಭಾಗದಲ್ಲಿ ಬ್ರಿಗೇಡಿಯರ್ ಐ.ಎನ್.ರೈ, ಹೊಟೇಲ್ ಉದ್ಯಮದಲ್ಲಿದ್ದು ಉತ್ತಮ ಸಮಾಜ ಸೇವೆಗೆ ಪುಣೆ ಹೊಟೇಲ್ ಉದ್ಯಮಿ ಜಗನ್ನಾಥ ಶೆಟ್ಟಿ ಪುಣೆ, ಉತ್ತಮ ಕೈಗಾರಿಕೋದ್ಯಮಿಯಾಗಿ ವಿ.ಕೆ. ಗ್ರೂಪ್ ಆಫ್ ಕಂಪನಿ ಮುಂಬೈನ ಅಧ್ಯಕ್ಷ ಮದ್ಯಗುತ್ತು ಕರುಣಾಕರ ಶೆಟ್ಟಿ ಮುಂಬೈ, ಜೀವಮಾನದ ಶ್ರೇಷ್ಠ ಸಾಧನೆಗೆ ಎಸ್‌ಕೆಎಸ್ ಗ್ರೂಪ್‌ನ ಸನತ್ ಕುಮಾರ್ ಶೆಟ್ಟಿ, ಉತ್ತಮ ಕೃಷಿಕ ಸಾಧನೆಗೆ ಕೆ.ಎನ್. ಪ್ರಫುಲ್ಲ ಆರ್. ರೈ, ನಡುಹಿತ್ಲು ಮಹಾಬಲ ಶೆಟ್ಟಿ, ಮೋನಪ್ಪ ಆಳ್ವ ವಿ. ಮುಳ್ಳೇರಿಯಾ, ಮೊಗರುಗುತ್ತು ರಾಜೇಂದ್ರ ಮೇಂಡ, ಸಾಹಿತ ಕ್ಷೇತ್ರದಲ್ಲಿ ಡಾ. ನಾಗವೇಣಿ ಹೊಸಬೆಟ್ಟು, ಉತ್ತಮ ಶಿಕ್ಷಕ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಉಷಾ ಎಚ್. ಬಲ್ಲಾಳ್, ಕರುಣಾಕರ ಶೆಟ್ಟಿ ಕೊಲ್ಲೂರು, ಉತ್ತಮ ಸಮಾಜ ಸೇವೆಗೆ ಸಿಎ ಎಚ್.ಆರ್. ಶೆಟ್ಟಿ, ಕಲಾ ಕ್ಷೇತ್ರದಲ್ಲಿ ಶಶಿ ವಿ. ಶೆಟ್ಟಿ, 2017ರ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಉತ್ತಮ ಕ್ರೀಡಾಪಟು ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಪುತ್ತೂರು, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಶೈಕ್ಷಣಿಕ ಸಾಧನೆಗೆ ನಿತೇಶ್ ಶೆಟ್ಟಿ ಅವರಿಗೆ ಚಿನ್ನದ ಪದಕ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಭಿಷೇಕ್ ಶೆಟ್ಟಿ ನೆಲ್ಯಾಡಿ, ಶಿಬಾನಿ ಜಿ. ಶೆಟ್ಟಿ, ಅದ್ವಿತ್ ಡಿ. ಶೆಟ್ಟಿ, ಸಾನ್ಯಾ ಡಿ. ಶೆಟ್ಟಿ, ಆಯುಷ್ ಆರ್. ಶೆಟ್ಟಿ ಹಾಗೂ ಯುವ ವಿಜ್ಞಾನಿಗಳಾದ ಪ್ರಖ್ಯಾತ್ ಭಂಡಾರಿ ಮತ್ತು ಪ್ರಣವ್ ಭಂಡಾರಿ ಪುತ್ತೂರು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಬಂಟರ ಯಾನೆ ನಾಡವರ ಮಾತೃ ಸಂಘವು ಪ್ರಸಕ್ತ ಸಾಲಿನಿಂದ 50 ಮಂದಿ ವಿಶೇಷ ಚೇತನರ ದತ್ತು ಪಡೆಯಲು ನಿರ್ಧರಿಸಿದ್ದು, ಇದಕ್ಕಾಗಿ ಸಂಘದ ಸಮಿತಿಯು ಆಯ್ಕೆ ಮಾಡಿರುವ ಅರ್ಹರಿಗೆ ಅಗತ್ಯ ನೆರವನ್ನು ಕಲ್ಪಿಸಲಾಯಿತು.

ಬಳಿಕ ಅಪರಾಹ್ನ 2:30ಕ್ಕೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ ನಡೆಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಸೇರಿದಂತೆ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ್ ಭಂಡಾರಿ ಅಡ್ಯಾರ್ ಹಾಗೂ ಶ್ರೀಮತಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.