ರಾಷ್ಟ್ರೀಯ

ಡಿಎಂಕೆ ವರಿಷ್ಠ ಕರುಣಾನಿಧಿ ಭೇಟಿ ಮಾಡಿದ ಕೆಸಿಆರ್‌: ತೃತೀಯ ರಂಗ ರಚನೆ ಮಾತುಕತೆ

Pinterest LinkedIn Tumblr


ಚೆನ್ನೈ: ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ತೃತೀಯ ರಂಗ ರಚನೆ ಪ್ರಯತ್ನವನ್ನು ಮುಂದುವರಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಭಾನುವಾರ ಡಿಎಂಕೆ ವರಿಷ್ಠ ಕರುಣಾನಿಧಿ ಅವರನ್ನು ಭೇಟಿಯಾದರು. ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್‌ ಅವರನ್ನು ಬರಮಾಡಿಕೊಂಡರು.

ಕರುಣಾನಿಧಿ ಅವರ ಯೋಗಕ್ಷೇಮ ವಿಚಾರಿಸಿದ ಬಳಿಕ ಕೆಸಿಆರ್‌ ಅವರು ಆಲ್ವಾರ್‌ಪೇಟ್‌ನ ಸ್ಟಾಲಿನ್‌ ನಿವಾಸದಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.

‘ಇದು ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ನಾವು ಈ ವಿಚಾರವನ್ನು ಚರ್ಚಿಸುತ್ತಲೇ ಇದ್ದೇವೆ. ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಲು 2-3 ತಿಂಗಳು ಬೇಕಾಗಬಹುದು’ ಎಂದು ರಾವ್ ತಿಳಿಸಿದರು.

‘ರಾಜ್ಯಗಳನ್ನು ಬಲಪಡಿಸುವ ನಿಟ್ಟನಿಲ್ಲಿ ಚರ್ಚೆ ನಡೆಯಿತು. ಶೀಘ್ರವೇ ಡಿಎಂಕೆ ಆಯೋಜಿಸಲಿರುವ ರಾಜ್ಯದ ಸ್ವಾಯತ್ತೆ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೆಸಿಆರ್‌ ಅವರನ್ನು ಆಹ್ವಾನಿಸಿದ್ದೇನೆ. ಆಂತರಿಕ ನಿರ್ಧಾರಗಳ ಬಳಿಕವಷ್ಟೇ ತೃತೀಯ ರಂಗ ರಚನೆ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯ’ ಎಂದು ಸ್ಟಾಲಿನ್ ತಿಳಿಸಿದರು.

Comments are closed.