ಕರಾವಳಿ

ದ.ಕ.ಜಿಲ್ಲೆ : ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

Pinterest LinkedIn Tumblr

ಮಂಗಳೂರು,ಎಪ್ರಿಲ್.17: ಮೇ.12ರಂದು ರಾಜ್ಯ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಎ.17ರಂದು ಬೆಳಗ್ಗೆ 11 ಗಂಟೆಯಿಂದ ಆರಂಭ ಗೊಂಡು ಸಂಜೆ 3 ಗಂಟೆಗೆ ಆಯಾಕ್ಷೇತ್ರದ ಚುನವಣಾಧಿಕಾರಿಗೆ ಎ.24ರವರೆಗೆ ನಡೆಯಲಿದೆ.ನಾಮಪತ್ರ ಹಿಂತೆಗೆತಕ್ಕೆ ಎ.27 ಕೊನೆಯ ದಿನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ತಿಳಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯ ಚುನಾವಣಾಧಿಕಾರಿಗಳ ವಿವರ: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಕ್ಕೆ -ಎಸ್.ಬಿ.ಪ್ರಶಾಂತ್ ಕುಮಾರ್(ದೂರವಾಣಿ ಸಂಖ್ಯೆ 7760432770),ದಕ್ಷಿಣ ವಿಧಾನ ಸಭಾ ಕೇತ್ರ-ಆಂತೋನಿ ಮರಿಯಾ ಇಮಾನ್ಯುವಲ್(8277931060), ಮಂಗಳೂರು ವಿಧಾನ ಸಭಾ ಕ್ಷೇತ್ರ-ಮಹೇಶ್ ಕರ್ಜಗಿ (9448933653) ಮೂಡುಬಿದ್ರೆ ಕ್ಷೇತ್ರ-ವಿ.ಪ್ರಸನ್ನ (9731192244), ಬಂಟ್ವಾಳ ವಿಧಾನ ಸಭಾ ಕ್ಷೇತ್ರ – ರವಿ ಬಸರಿಹಳ್ಳಿ(9902967070), ಬೆಳ್ತಂಗಡಿ ಕ್ಷೇತ್ರ- ಹೆಚ್.ಆರ್.ನಾಯಕ್ (9591417218),ಪುತ್ತೂರು ಕ್ಷೇತ್ರ-ಹೆಚ್.ಬಿ.ಕೃಷ್ಣ ಮೂರ್ತಿ( 9482326262),ಸುಳ್ಯ ಕ್ಷೇತ್ರ-ಬಿ.ಟಿ.ಮಂಜುನಾಥ್(9448067681) ರವರನ್ನು ಚುನಾವಣಾಧಿಕಾರಿಗಳಾಗಿ ನೇಮಕಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಚುನಾವಣಾ ಸಮಯ ಬೆ.7ರಿಂದ ಸಂಜೆ 5ರವರೆಗೆ: ಮೇ.12ರಂದು ನಡೆಯುವ ಚುನಾವಣಾ ದಿನದಂದು ಮತದಾರರು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ಒಳಗೆ ಮತದಾನ ಮಾಡಬಹುದಾಗಿದೆ.

ದೈಹಿಕ ಅಂಗ ವೈಕಲ್ಯ ಹೊಂದಿದವರು ಜಿಲ್ಲೆಯಲ್ಲಿ 10,003 ಜನರಿದ್ದಾರೆ ಇವರಿಗೆ ಮತದಾನ ಕೇಂದ್ರದಲ್ಲಿ ಅನುಕೂಲವಾಗುವಂತೆ 500 ಗಾಲಿ ಖುರ್ಚಿಗಳನ್ನು ವ್ಯವಸ್ಥೆ ಮಾಡಲಾಗುವುದು.

ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲೂ ವಿ ಪ್ಯಾಟ್ ಬಗ್ಗೆ ಮುಂಚಿತ ಮಾಹಿತಿನೀಡಲಾಗುವುದು. ಈ ಬಾರಿ ಮತದಾನ ಕೇಂದ್ರಗಳಲ್ಲಿ ವಿಪ್ಯಾಟ್ ನಿರ್ವಹಣೆಗೆ ಹೆಚ್ಚುವರಿ 11,990 ಸಿಬ್ಬಂದಿಗಳಿರುತ್ತಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 71 ಪ್ರಕರಣಗಳು ದಾಖಲಾಗಿದೆ.ಅಕ್ರಮ ಮಧ್ಯ ದಾಸ್ತನು ಪ್ರಕರಣಕ್ಕೆ ಸಂಬಂಧಿಸಿದಂತೆ 149 ಪ್ರಕರಣಗಳು ದಾಖಲಾಗಿದೆ.ಅಕ್ರಮ ಅಡುಗೆ ಅನಿಲ ದಾಸ್ತನು ಪ್ರಕರಣಗಳನ್ನು ,ಅಕ್ರಮ ನಗದು ಸಾಗಾಟ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಚುನಾವಣಾ ದಿನದಂದು ಸಾರಿಗೆ ವ್ಯವಸ್ಥೆ ಬೇಕು ಎನ್ನುವ ಬೇಡಿಕೆ ಇದೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕಯ ಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

Comments are closed.