ಕರಾವಳಿ

ಮದುವೆಯಾಗುವುದಾಗಿ ನಂಬಿಸಿ ಮುಗ್ಧೆಗೆ ಮಗು ಕರುಣಿಸಿದ ಭೂಪ ಜೈಲಿಗೆ!

Pinterest LinkedIn Tumblr

ಕುಂದಾಪುರ: ಇವರದ್ದೊಂದು ಬಡ ಅಮಾಯಕ ಕುಟುಂಬ. ಆ ಕುಟುಂಬ ಬಡತನದಲ್ಲಿಯೂ ಮರ್ಯಾದೆಯ ಜೀವನ ಸಾಗಿಸುತ್ತಿತ್ತು. ಈ ಕುಟುಂಬಕ್ಕೆ ವಕ್ಕರಿಸಿಕೊಂಡವನೋರ್ವ ಮದುವೆಯ ಹೆಸರಿನಲ್ಲಿ ಯುವತಿಯ ಬಾಳಲ್ಲಿ ಚೆಲ್ಲಾಟವಾಡಿ ಮಗು ಕರುಣಿಸಿ ಇಂದು ಈ ಸಂಸಾರವನ್ನು ನೋವಿನ ಕಡಲಲ್ಲಿ ಮುಳುಗುವಂತೆ ಮಾಡುತ್ತಾನೆ. ಆತನ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದ್ದು ಜೈಲಿನಲ್ಲಿದ್ದಾನೆ.

ಹೀಗೆ ನೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯೇ ಶಾರದಾ ಕುಲಾಲ್. ಉಡುಪಿ ತಾಲೂಕಿನ ಕರ್ಕುಂಜೆ ಗ್ರಾಮದವರು. ಇವರದ್ದೊಂದು ಬಡ ಕುಟುಂಬ. ತಂದೆ ತಾಯಿ ಇಬ್ಬರು ಹಿರಿಯ ಸಹೋದರಿಯರ ಜೊತೆ ಕಷ್ಟದ ಬದುಕು ಸಾಗಿಸುತ್ತಿದ್ದವಳೀಕೆ. ಆದರೆ ಈ ಸಂಸಾರ ಸುಮಾರು 6 ವರ್ಷಗಳಿಂದ ನೋವಿನಲ್ಲೇ ಮುಳುಗಿದೆ. ಅದ್ಯಾಕೆ ಅಂತೀರಾ….. ತನ್ನದೇ ಮಾವನ ಮಗ ಈಕೆಯ ಬಾಳಲ್ಲಿ ಆಡಿದ ಚೆಲ್ಲಾಟ ಇಂದು ಈಕೆಯನ್ನು ಹೈರಾಣಾಗಿಸಿದೆ. ಪ್ರೀತಿಯ ನೆಪವೊಡ್ಡಿ ಆಕೆಯ ಮೇಲೆ ಬಲತ್ಕಾರ ನಡೆಸುತ್ತಾನೆ. ಬಳಿಕ ನಿನ್ನನ್ನು ಮದುವೆಯಾಗುವೆ ಎಂದು ಪುಸಲಾಯಿಸುತ್ತಾನೆ. ಇದೆಲ್ಲದರ ಪರಿಣಾಮ ಈಕೆ ಈಗ ನಾಲ್ಕೂವರೆ ವರ್ಷದ ಮಗು ಹೊಂದಿದ್ದಾಳೆ. ಒಂದಷ್ಟು ವರ್ಷ ಊರು ಬಿಟ್ಟ ಈತ ಈಗ ಶಾರದಾಳನ್ನು ಮದುವೆಯಾಗಲು ಒಲ್ಲೆ ಎಂದಿದ್ದ. ಸದ್ಯ ನೊಂದ ಆಕೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಶಾರದಾಳಿಗೆ ಮೋಸ ಮಾಡಿ ಅರೆಸ್ಟ್ ಆಗಿರುವಾತನ ಹೆಸರು ಪ್ರಕಾಶ ಕುಲಾಲ್. ಸಂಬಂಧದಲ್ಲಿ ಶಾರದಾ ಅವರ ಮಾವನ ಮಗ. ಆಟೋ ರಿಕ್ಷಾ ಓಡಿಸಿಕೊಂಡಿದ್ದ ಈತ ನೀಯತ್ತಾಗಿದ್ದರೇ ಇಂದು ಶಾರದಾ ಹೀಗೆ ಕಣ್ಣಿರು ಹಾಕಬೇಕಿರಲಿಲ್ಲ. ಮತ್ತು ಶಾರದಾ ಕುತುಂಬ ಈ ಪರಿಯ ವ್ಯಥೆ ಪಡಬೇಕಿರಲಿಲ್ಲ. ತನ್ನ ಮಗಳ ನೋವನ್ನು ಕಂಡ ತಾಯಿಯೂ ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ಮದುವೆಯಾಗುವುದಾಗಿ ನಂಬಿಸಿ ಗಂಡು ಮಗು ಕರುಣಿಸಿದ ಈತ ಊರುಬಿಟ್ಟಿದ್ದ. ಇತ್ತೀಚೆಗೆ ಊರಿಗೆ ಬಂದಿದ್ದ ಪ್ರಕಾಶ್ ಇನ್ನೊಂದು ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ. ಅದ್ಯೆಗೋ ಈ ವಿಚಾರ ತಿಳಿಯುತ್ತಲೇ ಶಾರದಾ ಆತನ ಬಳಿ ಮದುವೆ ಪ್ರಸ್ತಾಪ ಮಾಡುತ್ತಾಳೆ. ನಮ್ಮಿಬ್ಬರ ಮಗುವಿನ ಭವಿಷ್ಯದ ಗತಿಯೇನು ಎಂದು ಆತನ ಬಳಿ ಪರಿಪರಿಯಾಗಿ ಅಂಗಲಾಚುತ್ತಾಳೆ. ಆದರೇ ಇದಕ್ಕೆಲ್ಲಾ ಕ್ಯಾರೆ ಅನ್ನದ ಪ್ರಕಾಶ ಮದುವೆಗೆ ಒಲ್ಲೆ ಎಂದು ಕಡ್ಡಿಮುರಿದಂತೆ ಹೇಳುತ್ತಾನೆ.

ದಿಕ್ಕು ತೋಚದ ಶಾರದಾ ತನ್ನ ನೋವನ್ನು ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಆರ್ಡಿ, ಸಿದ್ದಾಪುರದ ಸುಂದರ್ ಶೆಟ್ಟಿ ಎನ್ನುವವರ ಬಳಿ ಹೇಳಿದ್ದು ಅವರು ಆತನ ಮನವೊಲಿಸಿ ಮದುವೆ ಮಾಡಲು ಮುಂದಾದರೂ ಆತ ಒಪ್ಪೋದಿಲ್ಲ. ಕೊನೆಗೂ ಶಾರದಾ ತನಗಾದ ಅನ್ಯಾಯದ ವಿರುದ್ಧ ಠಾಣೆ ಮೆಟ್ಟಿಲೇರಿದ್ದು ಪ್ರಕಾಶ್ ವಿರುದ್ಧ ದೂರು ದಾಖಲಿಸಿದ್ದಾಳೆ. ಬ್ರಹ್ಮಾವರ ಸಿಪಿ‌ಐ ಅನಂತ ಪದ್ಮನಾಭ ಹಾಗೂ ಕೋಟ ಎಸೈ ಸಂತೋಷ್ ಕಾಯ್ಕಿಣಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಶಾರದಾ ಮಾತ್ರ ಬೀಳುವ ಸ್ಥಿತಿಯಲ್ಲಿನ ಮನೆಯಲ್ಲಿ ಪುಟ್ಟ ಕಂದಮ್ಮ, ಇಳಿವಯಸ್ಸಿನ ತಂದೆ ಹಾಗೂ ಸಹೋದರಿಯರಿಬ್ಬರ ಜೊತೆ ಯಾತನೆಯ ಬದುಕು ಸಾಗಿಸುತ್ತಿದ್ದು ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.

Comments are closed.