ಕರಾವಳಿ

ಸಚಿವರು ಹಾಕಿದ 10 ಕೋಟಿ ಮಾನನಷ್ಟ ಮೊಕದ್ದಮೆಗೆ ಭಯಪಡೋದೆ ಇಲ್ಲ: ಟಿ.ಜೆ. ಅಬ್ರಹಾಂ

Pinterest LinkedIn Tumblr

ಉಡುಪಿ: ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ, ನೋಟಿಸ್ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾನು ಮೂವತ್ತು ದಿನದ ಗಡುವು ಕೊಡುತ್ತೇನೆ, ಕೋರ್ಟಿನಲ್ಲಿ ಕೇಸು ದಾಖಲು ಮಾಡಿ ಬಳಿಕ ಕೋರ್ಟಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಿ ಎಂದು ಆರ್.ಟಿ.ಐ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಸವಾಲು ಹಾಕಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಸಚಿವ ಮಧ್ವರಾಜ್ ಮೂರು ದಿನ ಗಡುವು ಕೊಟ್ಟಿದ್ದರು. ಆದರೇ ನಾನು ಎರಡನೇ ದಿನಕ್ಕೆ ಉಡುಪಿಗೆ ಬಂದಿದ್ದೇನೆ. ನನ್ನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದು ನಾನದಕ್ಕೆ ಬೆದರಲ್ಲ ಎಂದರು.

ಮಧ್ವರಾಜ್ ಅವರನ್ನು ಕೋರ್ಟಿಗೆ ಎಳೆಯುತ್ತೇನೆ, ಆಗ ಪ್ರತಿಯೊಂದು ದಾಖಲೆ ಹೊರಗೆ ಬರುತ್ತದೆ. ಮೂವತ್ತು ದಿನದಲ್ಲಿ ಸಾಭೀತುಪಡಿಸದಿದ್ದರೆ ನಾನು ಕೇಸು ದಾಖಲು ಮಾಡುತ್ತೇನೆ. ಆದಷ್ಟು ಬೇಗ ಕೇಸು ದಾಖಲು ಮಾಡಿ, ಲೋಕಾಯುಕ್ತರಿಗೆ ಸಲ್ಲಿಸಿದ ದಾಖಲೆಯಲ್ಲಿ 40 ಕೋಟಿ ರುಪಾಯಿ ದಾಖಲೆ ತೋರಿಸಿದ್ದಾರೆ. 1.10 ಕೋಟಿ ಆಸ್ತಿ ಅಡವಿಟ್ಟು 193 ಕೋಟಿ ಸಾಲ ಪಡೆದಿರುವ ಸಚಿವರು ಮಾಡಿದ್ದು ಮಹಾ ಮೋಸ. ಈ ಹಗರಣದಲ್ಲಿ ಯಾರೂ ಶಾಮೀಲಾಗಿದ್ದರೂ ಅದನ್ನು ಬಿಡಬಾರದು ಎಂದರು.

Comments are closed.