ಕರ್ನಾಟಕ

ಪತ್ರಕರ್ತನ ಹತ್ಯೆಗೆ ಸುಪಾರಿ; ಪತ್ರಕರ್ತ ರವಿ ಬೆಳಗೆರೆ ಅರೆಸ್ಟ್‌‌

Pinterest LinkedIn Tumblr

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಹಾಯ್‌ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳಗೆರೆಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಳಗೆರೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹಾಯ್‌ ಬೆಂಗಳೂರು ಕಚೇರಿಯಲ್ಲೇ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಪತ್ರಕರ್ತ ರವಿ ಬೆಳಗರೆ ಅವರೇ ಬಂದೂಕು ನೀಡಿದ್ದಾರೆ ಎಂದು ಹಂತಕರು ಎಸ್ ಐಟಿ ಅವರ ಮುಂದೆ ಮಹತ್ವರವಾದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸುಪಾರಿ ಪಡೆದು ಆಗಸ್ಟ್ 28ರಂದು ಸುನಿಲ್ ಮನೆಗೆ ತೆರಳಿದ್ದ ಹಂತಕರು, ಸಿಸಿಟಿವಿ ನೋಡಿ ವಾಪಸ್ ಬಂದಿದ್ದರು. ಹಂತಕರಾದ ಶಶಿಧರ್ ಮುಂಡಾಧರ್ ಮತ್ತು ಸ್ನೇಹಿತರು ವಿಜಯಪುರ ಮೂಲದವರು.

ವೈಯಕ್ತಿಕ ದ್ವೇಷದಿಂದ ರವಿ ಬೆಳಗರೆ ಅವರು ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರು. ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ 12 ಪೊಲೀಸರ ತಂಡದಿಂದ ದಾಳಿ ನಡೆಸಲಾಗಿದೆ. ವಾರೆಂಟ್ ಪಡೆದು ಸಿಸಿಬಿ ಬೆಳಗರೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ರವಿಬೆಳಗರೆ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸಿದ ವಿಚಾರಣೆ ವೇಳೆ ವಿಜಯಪುರದ ಶಾರ್ಪ್‌ ಶೂಟರ್‌ ಈ ವಿಷಯ ಬಾಯ್ಬಿಟ್ಟಿದ್ದಾನೆ.

ವಿಶೇಷ ತನಿಖಾತಂಡದ ಅಧಿಕಾರಿಗಳು ಬೆಳಗರೆಯ ಮನೆ ಜಪ್ತಿ ಮಾಡಿ ಶಸ್ತ್ರಾಸ್ತ್ರ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ಕೈಗೊಂಡಿರುವುದಾಗಿ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

Comments are closed.